ನೆಹರೂ ಮೆಮೋರಿಯಲ್ ಕಾಲೇಜು ವತಿಯಿಂದ ಕೈಗಾರಿಕಾ ಕ್ಷೇತ್ರಕ್ಕೆ ಭೇಟಿ

0

ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇದರ ಆಶ್ರಯದಲ್ಲಿ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಮೈಸೂರು ಜಿಲ್ಲೆಯ ವಿವಿಧ ಕೈಗಾರಿಕಾ ಕ್ಷೇತ್ರಕ್ಕೆ ಜುಲೈ 4, 2023ರಿಂದ ಜುಲೈ 7ರ ವರೆಗೆ ಭೇಟಿ ನೀಡಿದ್ದರು.


ಈ ಕೈಗಾರಿಕಾ ಭೇಟಿಯಲ್ಲಿ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ, ಶ್ರೀಮತಿ ರಮ್ಯ ಎಸ್ ಕೆ ಇವರು ಉಪಸ್ಥಿತರಿದ್ದರು.


ಈ ಕೈಗಾರಿಕಾ ಭೇಟಿಯಲ್ಲಿ ಕೊಹಿನೂರ್ ಇಂಡಸ್ಟ್ರಿಯಲ್ ಲಿಮಿಟೆಡ್ , ಅಮಿಕ್ ಅಲ್ಯೂಮಿನಿಯಂ ಎಂಟರ್ಪ್ರೈಸಸ್,ಆಶೀರ್ವಾದ್ ಎಂಜಿನಿಯರಿಂಗ್ ವರ್ಕ್ಸ್ ಲಿಮಿಟೆಡ್, ಐ ಟಿ ಸಿ ಫುಡ್ ಡಿವಿಷನ್ ಲಿಮಿಟೆಡ್ ನಂಜನಗೂಡು , ಮೈಪೊಳ್ ಟ್ಯೂಬ್ ಮ್ಯನ್ಫ್ಯಾಕ್ಚರಿಂಗ್ ಲಿಮಿಟೆಡ್ ಮತ್ತು ಲೂನಾರ್ಸು ಉತ್ಪಾದನ ಘಟಕಕ್ಕೆ ಭೇಟಿ ನೀಡಿ ಇದರಿಂದ ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಮಾಹಿತಿಯನ್ನು ಪಡೆದುಕೊಂಡರು.