ಮಳೆಗೆ ಬೃಹದಾಕಾರದ ಮರ ಅಡ್ಡಲಾಗಿ ಬಿದ್ದ ಪರಿಣಾಮವಾಗಿ ಜಾಲ್ಸೂರು – ಕಾಸರಗೋಡು ರಸ್ತೆ ಬಂದ್ ಆಗಿರುವ ಘಟನೆ ಜಾಲ್ಸೂರು ಗ್ರಾಮದ ಬೈದರಕೊಳಂಜಿ ಎಂಬಲ್ಲಿ ಜು.29ರಂದು ಸಂಭವಿಸಿದೆ.
ಜಾಲ್ಸೂರು- ಕಾಸರಗೋಡು ರಸ್ತೆಯ ಬೈದರಕೊಳಂಜಿ ಎಂಬಲ್ಲಿ ಮರ ಬಿದ್ದು, ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯವಾಗಿದ್ದು, ಮರ ತೆರವುಗೊಳ್ಳದೇ ಇದ್ದುದರಿಂದ ರಸ್ತೆ ಬ್ಲಾಕ್ ಆಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಂತಿರುವುದಾಗಿ ತಿಳಿದುಬಂದಿದೆ.