ಇನ್ನರ್ ವೀಲ್ ಕ್ಲಬ್, ರೋಟರಿ ಸಿಟಿ ವತಿಯಿಂದ ನಾಗಪಟ್ಟಣ ಶಾಲೆಯಲ್ಲಿ ವನಮಹೋತ್ಸವ

0

ಸುಳ್ಯದ ಇನ್ನರ್ ವೀಲ್ ಕ್ಲಬ್ ಹಾಗೂ ರೋಟರಿ ಸಿಟಿ ಜಂಟಿಯಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಜು.21 ರಂದು ನಾಗಪಟ್ಟಣ ಸ.ಹಿ.ಪ್ರಾ. ಶಾಲೆಯಲ್ಲಿ ಆಯೋಜಿಸಿದ್ದರು.
ಡಾ.ಪಿ.ಕೆ.ಕೇಶವರು ಶುಚಿತ್ವ ಹಾಗೂ ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾ ಮಕ್ಕಳಿಗಾಗಿ ಸುಪ್ರಿಯಾ ಭಾನುಪ್ರಕಾಶ್ ಹಾಗೂ ಭಾನುಪ್ರಕಾಶ್ ರವರು ಕೊಡುಗೆಯಾಗಿತ್ತ ಕುರ್ಚಿ ಮತ್ತು ಮೇಜನ್ನು ಇನ್ನರ್ ವೀಲ್ ಕ್ಲಬ್ ನ ವತಿಯಿಂದ ಶಾಲೆಗೆ ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರೋಟರಿ ಸಿಟಿ ಅಧ್ಯಕ್ಷ ಗಿರೀಶ್ ನಾರ್ಕೋಡು ಮತ್ತು ಪದಾಧಿಕಾರಿಗಳು, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸವಿತಾ ನಾರ್ಕೋಡು ಮತ್ತು ಪದಾಧಿಕಾರಿಗಳು, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಯನ ಉಲ್ಲಾಸ್ ಹಾಗೂ ಸದಸ್ಯರು ಭಾಗವಹಿಸಿದ್ದರು.