ಸುಳ್ಯ ತಾಲೂಕು ಅತ್ಯುತ್ತಮ ಯುವಕ/ಯುವತಿ ಮಂಡಲ ಪ್ರಶಸ್ತಿಗೆ ಅರ್ಜಿ ಆಹ್ವಾನ

0

ಆ.20 ಕೊನೆಯ ದಿನ

2022-23ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಯುವಕ ಮಂಡಲ ಮತ್ತು ಯುವತಿ ಮಂಡಲಗಳನ್ನು ಗುರುತಿಸಿ ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಪ್ರಶಸ್ತಿ ನೀಡಿ ಗೌರವಿಸಲಿದೆ.
ಯುವಜನ ಸಂಯುಕ್ತ ಮಂಡಳಿಗೆ ನೋಂದಾಯಿತಗೊಂಡ ಸುಳ್ಯ ತಾಲೂಕಿನ ಯುವಕ ಹಾಗೂ ಯುವತಿ ಮಂಡಲಗಳು 2022 ಆಗಸ್ಟ್ 1 ರಿಂದ 2023 ಆಗಸ್ಟ್ 1 ರವರೆಗೆ ತಾವು ಮಾಡಿದ ಕಾರ್ಯಕ್ರಮಗಳ ವಿವರ(ಆಮಂತ್ರಣ ಪತ್ರಿಕೆ -ಫೋಟೋಗಳು-ಪತ್ರಿಕಾ ವರದಿ-ಪಡೆದ ಪ್ರಶಸ್ತಿ-ವಿಶೇಷ ಸಾಧನೆ)ವನ್ನು 20 ಆಗಸ್ಟ್ 2023 ರೊಳಗೆ ಅಧ್ಯಕ್ಷರು/ಕಾರ್ಯದರ್ಶಿ ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇವರಿಗೆ ತಲುಪಿಸಬೇಕು.
ಆಯ್ಕೆಯಾದ ಅತ್ಯುತ್ತಮ ಯುವಕ ಮಂಡಲ ಹಾಗೂ ಯುವತಿ ಮಂಡಲಗಳನ್ನು ಮಂಡಳಿಯ ಮುಂದಿನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು‌ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ ತಿಳಿಸಿದ್ದಾರೆ.