ನಿಸರ್ಗ ನೀಡುವ ಸವಾಲುಗಳಿಗೆ ನಿಸರ್ಗದ ಮೂಲಕವೇ ಉತ್ತರ ನೀಡುವ ಆಟಿ ತಿಂಗಳು : ನಾಯರ್ ಕೆರೆ
ನಿಸರ್ಗ ನೀಡುವ ಹಲವು ಸವಾಲುಗಳಿಗೆ ನಿಸರ್ಗದ ಮೂಲಕವೇ ಉತ್ತರ ನೀಡುವ ವೈವಿಧ್ಯಮಯ ತಿಂಗಳು ಆಟಿ. ಈ ಕಾಲದ ಹಲವು ಸ್ಥಿತ್ಯಂತರಗಳಿಗೆ ಸಾಂತ್ವನ ಮತ್ತು ಪರಿಹಾರಕ್ಕಾಗಿ ಹಲವು ವಿಧಿ ನಿಷೇಧಗಳನ್ನು ಹೊಂದಿದ ಅಪೂರ್ವ ತಿಂಗಳೂ ಆಟಿ. ಆಟಿ ಆಚರಣೆಯ ಮೂಲಕ ಈ ತಿಂಗಳ ನಿಜವಾದ ಮಾಹಿತಿಗಳು ಸಮಾಜಕ್ಕೆ ತಲುಪಬೇಕು ಎಂದು ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಹೇಳಿದರು.
ಶ್ರೀ ದುರ್ಗಾ ಮಹಿಳಾ ಮಂಡಲ ಕೂತ್ಕುಂಜ, ಶ್ರೀದೇವಿ ಸಂಜೀವಿನಿ ಸಂಘ ಚಿದ್ಗಲ್, ಧರ್ಮಶ್ರೀ ಮಹಿಳಾ ಸ್ವಸಹಾಯ ಸಂಘ ಚಿದ್ಗಲ್, ಧನುಶ್ರೀ ಮಹಿಳಾ ನವೋದಯ ಸ್ವಸಹಾಯ ಸಂಘ ಚಿದ್ಗಲ್, ದುರ್ಗಾಶ್ರೀ ಆತ್ಮ ರೈತ ಸಂಘ ಚಿದ್ಗಲ್, ಚಿಗುರು ಮಹಿಳಾ ನವೋದಯ ಸ್ವಸಹಾಯ ಸಂಘ ಅಡ್ಡತ್ತೋಡು ಇದರ ಜಂಟಿ ಆಶ್ರಯದಲ್ಲಿ ಪದ್ಮಾವತಿ ಚಿನ್ನಪ್ಪ ಗೌಡ ಚಿದ್ಗಲ್ಲು ಅವರ ಮನೆಯಲ್ಲಿ ನಡೆದ ಆಟಿ ಆಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಟಿಯ ಕುರಿತು ಮಾತನಾಡಿದರು.
ಕುಕ್ಕೆ ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ವೇದಾ ಶಿವರಾಂ ಏನೆಕಲ್ ಕಾರ್ಯಕ್ರಮ ಉದ್ಘಾಟಿಸಿ, ಆಟಿ ತಿಂಗಳು ಉಳಿದ ತಿಂಗಳುಗಳಿಗಿಂತ ತೀರಾ ಭಿನ್ನ. ಇದರ ಆಚರಣೆಯ ಮಹತ್ವವನ್ನು ತಿಳಿಸುವ ಕಾರ್ಯ ಅಭಿನಂದನಾರ್ಹ ಎಂದರು.
ಕೂತ್ಕುಂಜ ಶ್ರೀ ದುರ್ಗಾ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಲತಾ ದಿನೇಶ್ ಚಿದ್ಗಲ್ ಅಧ್ಯಕ್ಷತೆ ವಹಿಸಿದ್ದರು. ಸುದ್ದಿ ಬಿಡುಗಡೆಯ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಮುಖ್ಯ ಅತಿಥಿಗಳಾಗಿದ್ದರು.
ಶ್ರೀ ದೇವಿ ಸಂಜೀವಿನಿ ಸಂಘದ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಹೊನ್ನಪ್ಪ ಗೌಡ ಚಿದ್ಗಲ್, ಧನುಶ್ರೀ ಮಹಿಳಾ ನವೋದಯ ಸ್ವಸಹಾಯ ಸಂಘದ ಅಧ್ಯಕ್ಷೆ ಶ್ರೀಮತಿ ಹೇಮಾ ವಸಂತ್ ಚಿದ್ಗಲ್, ಅಡ್ಡತ್ತೋಡು ಚಿಗುರು ನವೋದಯ ಸಂಘದ ಅಧ್ಯಕ್ಷೆ ಶ್ರೀಮತಿ ಬೇಬಿ ದೇವಿದಾಸ್ ಕಕ್ಯಾನ ಉಪಸ್ಥಿತರಿದ್ದರು.
ಶ್ರೀಮತಿ ಪದ್ಮಾವತಿ ಚಿನ್ನಪ್ಪ ಗೌಡ ಪ್ರಾರ್ಥಿಸಿದರು. ಶ್ರೀಮತಿ ಚಂದ್ರಾವತಿ ಹೊನ್ನಪ್ಪ ಗೌಡ ಚಿದ್ಗಲ್ ಸ್ವಾಗತಿಸಿ, ಶ್ರೀಮತಿ ಹೇಮಾ ವಸಂತ್ ಚಿದ್ಗಲ್ ಪ್ರಸ್ತಾವನೆಗೈದರು. ಶ್ರೀಮತಿ ವೀಣಾ ಗಿರಿಧರ್ ವಂದಿಸಿದರು. ಶ್ರೀಮತಿ ಸುಶ್ಮಿತಾ ಆದಿತ್ಯ ಚಿದ್ಗಲ್ ಕಾರ್ಯಕ್ರಮ ನಿರೂಪಿಸಿದರು.
ಆಟಿ ಆಚರಣೆ ಪ್ರಯುಕ್ತ ವಿಶೇಷ ತಿನಿಸುಗಳ ಸ್ಪರ್ಧೆ, ಚೆನ್ನೆಮಣೆ ಆಟ, ಜಾನಪದ ಹಾಡು ಮೊದಲಾದ ಕಾರ್ಯಕ್ರಮಗಳು ನಡೆಯಿತು.