ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಕಾಲೋನಿ ನಿವಾಸಿ ರಾಮಕೃಷ್ಣ ಗೌಡ ಕುಲ್ಕುಂದ ಆ.12 ರ ಮುಂಜಾನೆ ನಿಧನರಾದರು. ಅಸೌಖ್ಯತೆ ಉಂಟಾದ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ಅವರು ನಿಧನರಾದರು. ಮೃತರು ಈ ಹಿಂದೆ ಗ್ರಾಮ ಕರಣಿಕರ ಕಚೇರಿಯಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸುತಿದ್ದು ನಿವೃತ್ತರಾಗಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀದೇವಿ, ಮಕ್ಕಳಾದ ಆದರ್ಶ, ಶ್ರೀಮತಿ ಮಂಜುಳಾ, ಶ್ರೀಮತಿ ಮಮತಾ ಬೆಂಗಳೂರು, ಸೊಸೆ, ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.