ಪೈಚಾರು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಇದರ 26 ನೇ ವಾರ್ಷಿಕ ಮಹಾಸಭೆ ಹಾಗೂ ನೂತನ ಸಾಲಿನ ಸಮಿತಿ ರಚನಾ ಸಭೆ ಆ.11 ರಂದು ಸಮಿತಿ ಅಧ್ಯಕ್ಷ ರಿಫಾಯಿರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಳೆದ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಕಾರ್ಯಧರ್ಶಿ ವಾಚಿಸಿದರು. ಬಳಿಕ ಮುಂದಿನ ದಿನಗಳಲ್ಲಿ ಸಮಿತಿ ವತಿಯಿಂದ ನಡೆಸಲ್ಪಡುವ ಯೋಜನೆಗಳ ಬಗ್ಗೆ ಚರ್ಚೆಗಳು ನಡೆಯಿತು.
ಈ ಸಂಧರ್ಭದಲ್ಲಿ ನೂತನ ಸಮಿತಿ ರಚಿಸಿ ಅಧ್ಯಕ್ಷರಾಗಿ ಲತೀಫ್ ಟಿ ಏ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಗೌರವಾಧ್ಯಕ್ಷರಾಗಿ ಶಾಫಿ ಪ್ರಗತಿ, ಮುಂದುವರಿಸಿದರು ಉಪಾಧ್ಯಕ್ಷರಾಗಿ ಇಬ್ರಾಹಿಂ ಯಸ್.ಎ ಶಾಂತಿನಗರ, ಪ್ರಧಾನ ಕಾರ್ಯದರ್ಶಿಯಾಗಿ ರಜಾಕ್ ಬೊಳುಬೈಲು, ಜೊತೆ ಕಾರ್ಯದರ್ಶಿಯಾಗಿ ಮುಜೀಬ್ ಪೈಚಾರ್, ಕೋಶಾಧಿಕಾರಿಯಾಗಿ ಬಶೀರ್ ಆರ್ ಬಿ, ಸದಸ್ಯರುಗಳಾಗಿ ಸಿಯಾಬ್ ಬೆಟ್ಟಂಬಾಡಿ, ಸವಾದ್,ಶರೀಕ್,ಆರಿಸ್, ಫಲುಲುದ್ಧಿನ,ಅರ್ಷಾದ್, ಅಶ್ರಫ್,ಜುನೈದ್ ಅವರನ್ನು ಆಯ್ಕೆ ಮಾಡಲಾಯಿತು. ಕಳೆದ ಸಾಲಿನ ಅಧ್ಯಕ್ಷರಾದ ರಿಪಾಯಿ ಮಾತನಾಡಿ ಸಮಿತಿ ವತಿಯಿಂದ ಸುಮಾರು 2 ಲಕ್ಷದ 23 ಸಾವಿರ ರೂಪಾಯಿಗಳ ಖರ್ಚನ್ನು ವಿವರಿಸಿ ಬಡ ರೋಗಿಗಳಿಗೆ 52 ಸಾವಿರ ಧನಸಹಾಯ, ಬಡ ವಿದ್ಯಾರ್ಥಿಗಳಿಗೆ 28 ಸಾವಿರ ರ ರೂಪಾಯಿಗಳ ಸಮವಸ್ತ್ರ, ಲೇಖನ ಪುಸ್ತಕ ವಿತರಣೆ, ಬಡ ಹೆಣ್ಣು ಮಕ್ಕಳ ವಿವಾಹಕ್ಕೆ 72 ಸಾವಿರ ರೂ ಗಳ ಧನಸಹಾಯವನ್ನು ಮಾಡಿರುವ ವಿವರಗಳನ್ನು ತಿಳಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲತೀಫ್ ಮಾತನಾಡಿ ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ಬಡ ರೋಗಿಗಳಿಗೆ ಸಹಾಯಧನ, ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಸಹಾಯಧನ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ಬಗ್ಗೆ ಆದ್ಯತೆ ನೀಡುವುದಾಗಿ ಮಾತನಾಡಿದರು. ಬಶೀರ್ ಸ್ವಾಗತಿಸಿ ಸಿರಾಜ್ ಎಸ್ ಪಿ ವಂದಿಸಿದರು.