ಅರ್ಜುನ್ ನನ್ನು ಕಂಜಿಪಿಲಿ ಜತೆ ಬಿಟ್ಟು ಕಳಿಸಿದ ಪೋಲೀಸರು

0

ತೊಡಿಕಾನ ನೈತಿಕ ಪೋಲೀಸ್ ಗಿರಿ ಪ್ರಕರಣದಲ್ಲಿ ಪೋಲೀಸ್ ವಶದಲ್ಲಿದ್ದ ಅರಂತೋಡಿನ ಅರ್ಜುನ್ ಎಂಬ ಯುವಕನನ್ನು ಸುಳ್ಯ ಪೋಲೀಸರು ಬಿ.ಜೆ.ಪಿ. ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿಯವರ ಜತೆಗೆ ಬಿಟ್ಟು ಕಳಿಸಿದುದಾಗಿ ತಿಳಿದುಬಂದಿದೆ.


ನೈತಿಕ ಪೋಲೀಸ್ ಗಿರಿ ಘಟನೆಗೆ ಸಂಬಂಧಿಸಿ ಹಿಂದೂ ಯುವಕರನ್ನು ಪೋಲೀಸರು ಠಾಣೆಯಲ್ಲಿ ಕೂರಿಸಿದ್ದಾರೆಂಬ ವಿಷಯ ತಿಳಿದು ಹರೀಶ್ ಕಂಜಿಪಿಲಿ ಮತ್ತು ಇತರರು ಠಾಣೆಗೆ ಬಂದಿದ್ದರು.


ತಡರಾತ್ರಿ ಪುತ್ತೂರಿನಿಂದ ಅರುಣ್ ಕುಮಾರ್ ಪುತ್ತಿಲ ಕೂಡಾ ಬಂದು ಪೋಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಹೋದರು.
ಸ್ವಲ್ಪ ಹೊತ್ತಿನ ಬಳಿಕ ಎಸ್.ಐ.ಯವರು ಹರೀಶ್ ಕಂಜಿಪಿಲಿಯವರಿಂದ ಬರೆಸಿ ಪಡೆದುಕೊಂಡು ಅರ್ಜುನ್ ನನ್ನು ಅವರ ಜತೆ ಕಳಿಸಿಕೊಟ್ಟರೆನ್ನಲಾಗಿದೆ.