ಪೂದೆ : ಕೆಸರಡ್ ಒಂಜಿದಿನ ಕಾರ್ಯಕ್ರಮ

0

ಪೂದೆ ಅವಳಿ ದೇವಸ್ಥಾನಗಳಾದ ಶ್ರೀಗಣಪತಿ ಮಲ್ಲಿಕಾರ್ಜುನ ಮತ್ತು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಇಲ್ಲಿ ಕೋಡಿಯಡ್ಕ ಚಂದ್ರಶೇಖರವರು ಉಳಿಸಿಕೊಂಡ ಗದ್ದೆಯಲ್ಲಿ ಮುರುಳ್ಯ ಹಿಂದೂಬಾಂಧವರ ಆಶ್ರಯದಲ್ಲಿ ಕೆಸರಡ್ ಒಂಜಿ ದಿನ ಕಾರ್ಯಕ್ರಮ ನಡೆಯಿತು.

ಆ. 13 ರಂದು ನಡೆದ ಈ ಕಾರ್ಯಕ್ರಮದಲ್ಲಿ ದೇವಳದ ಪ್ರಧಾನ ಅರ್ಚಕ ಪೂದೆ ಸುಬ್ರಹ್ಮಹ್ಯ ಉಪಾಧ್ಯಾಯರ ವೈಧಿಕ ಕಾರ್ಯಕ್ರಮಗಳೊಂದಿಗೆ ಪ್ರಾರ್ಥನೆ ಸಲ್ಲಿಸಿ ಯಶಸ್ವಿಯನ್ನು ಬೇಡಿಕೊಳ್ಳಲಾಯಿತು.

ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ವ್ಯವಸ್ಥಾಪದ ಸಮಿತಿಯ ಅಧ್ಯಕ್ಷ ವಸಂತ ನಡುಬೈಲುರವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.

ಆಟಿ ವಿಶೇಷತೆ ಮತ್ತು ಜಾನಪದ ಸಂಸ್ಕೃತಿ ಉಳಿಸುವುದರ ಬಗ್ಗೆ ಮಾತನಾಡಿದರು. ಹಾಸನ ಜೈಲರ್ ಪುಟ್ಟಣ್ಣ ಆಚಾರ್ಯರವರು ತುಳುವೇರು ಕಷ್ಟಪಟ್ಟು ಪಟ್ಟ ಮತ್ತು ಉಳಿಸಿಕೊಂಡ ಗದ್ದೆ ಮಾಲೀಕರ ಬಗ್ಗೆ ವಿವರಿಸಿದರು.

ಪ್ರಗತಿಪರ ಕೃಷಿಕ ಪೂದೆ ಕೃಷ್ಣಪ್ಪ ಗೌಡ ಮಾತನಾಡಿದರು. ಸಂಘಟನಾ ಅಧ್ಯಕ್ಷ ಅನುಪೂ ಬಿಳಿಮಲೆ ಹಳ್ಳಿ ಸಂಪ್ರದಾಯವನ್ನು ಮರೆಯದೆ ಇಂತಹ ಹೆಚ್ಚೆಚ್ಚು ಕಾರ್ಯಕ್ರಮವನ್ನು ಮಾಡುವುದರ ಮೂಲಕ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡಬೇಕೆಂದರು. ಭೂಮಾತೆಗೆ ಪುಷ್ಪ ನಮನ ಸಲ್ಲಿಸಲಾಯಿತು. ಹಿರಿಯರಾದ ಬರೆಮೇಲು ಕೃಷ್ಣಪ್ಪಗೌಡ ಗದ್ದೆ ಹಾಲೆಯವರು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವ್ಯವಸ್ಥಾಪದ ಸಮಿತಿ ಅಧ್ಯಕ್ಷ ಭುವನೇಶ್ವರ ಪೂದೆ, ಸಂಘಟನಾ ಕಾರ್ಯದರ್ಶಿ ವಸಂತ ಪೂದೆ ವೇದಿಕೆಯಲ್ಲಿದ್ದರು.

ಉಪನ್ಯಾಸಕ ಐತಪ್ಪ ಅಲೆಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ಅನೂಪು ಬಿಳಿಮಲೆ ಸ್ವಾಗತಿಸಿ, ತಸ್ವಿನ್ ವಂದಿಸಿದರು. ಭವಿಷ್ಯ ಆಚಾರ್ಯ ಪೂದೆ ಪ್ರಾರ್ಥಿಸಿದರು.