ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ನಗರ ಪಂಚಾಯತ್ ಕಚೇರಿ ಸಭಾಂಗಣ ಮತ್ತು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ತುಂಬಿ ತುಳುಕಿದ ಫಲಾನುಭವಿಗಳು

0

ಕರ್ನಾಟಕ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಸುಳ್ಯ ನಗರ ಪಂಚಾಯತಿ ವತಿಯಿಂದ ಆಯೋಜಿಸಗಲಾಗಿರುವ ಕಾರ್ಯಕ್ರಮದ ಎರಡು ಸಭಾಂಗಣ ಸಾವಿರಾರು ಮಂದಿ ಫಲಾನುಭವಿಗಳಿಂದ ತುಂಬಿ ತುಳುಕುತ್ತಿದೆ.

ಇಂದು ಬೆಳಿಗ್ಗೆ 10 ಗಂಟೆಯಿಂದಲೇ ಜನರು ಸಾಗರೋಪಾದಿಯಲ್ಲಿ ನಗರ ಪಂಚಾಯಿತಿನ ಕಚೇರಿಯತ್ತ ಸಾಗಿ ಬಂದರು.

ಪ್ರಥಮವಾಗಿ ಸುಳ್ಯ ಲಯನ್ಸ್ ಕ್ಲಬ್ ಸದನದಲ್ಲಿ ಬೃಹತ್ ಎಲ್ಇಡಿ ಸ್ಪರ್ಧೆಯನ್ನು ಅಳವಡಿಸಿ ಸಾರ್ವಜನಿಕರಿಗೆ ನೇರ ಪ್ರಸಾರಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು. ಆದರೆ 12 ಗಂಟೆಯ ಸಂದರ್ಭದಲ್ಲಿ ಸಭಾಭವನ ತುಂಬಿ ತುಳುಕಿ, ಬಳಿಕ ಸಭಾಂಗಣದ ಹೊರಭಾಗದಲ್ಲಿ ಜಮಾಯಿಸಿದ್ದ ಜನರನ್ನು ಸುಳ್ಯ ನಗರ ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಸಿದ್ದಗೊಳಿಸಿದ್ದ ಸಭಾಂಗಣಕ್ಕೆ ಕಳುಹಿಸಲಾಯಿತು. ಇದೀಗ ಈ ಎರಡು ಸಭಾಂಗಣಗಳು ಫಲಾನುಭವಿಗಳಿಂದ ತುಂಬಿ ತುಳುಕುತ್ತಿದೆ.
ನಗರ ಪಂಚಾಯತ್ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು, ಸುಳ್ಯ ಕಾಂಗ್ರೆಸ್ ಪಕ್ಷದ ಮುಖಂಡರು ಸಾರ್ವಜನಿಕರಿಗೆ ವ್ಯವಸ್ಥೆಯನ್ನು ನೀಡಿ ಸಹಕರಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡಂಕೇರಿ, ಶರೀಫ್ ಕಂಠಿ,ಡೇವಿಡ್ ಧೀರ ಕ್ರಾಸ್ತ, ಕೆ ಎಸ್ ಉಮ್ಮರ್, ರಿಯಾಜ್ ಕಟ್ಟೆಕ್ಕಾರ್ಸ್,ಶಿಲ್ಪಾ ಸುದೇವ್,ನಾರಾಯಣ ಶಾಂತಿನಗರ,ಶೀಲಾ ಕುರುಂಜಿ,
ಕೆ ಪಿ ಸಿ ಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ, ಕೆಪಿಸಿಸಿ ವಕ್ತಾರ ಟಿ ಎಂ ಶಹೀದ್,ಕೆಪಿಸಿಸಿ ಸಂಯೋಜಕ ಎಸ್ ಶಂಸುದ್ದೀನ್ ಅರಂಬೂರು, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಗೋಕುಲ್ ದಾಸ್, ಭವಾನಿ ಶಂಕರ್, ಶಶಿಧರ ಎಂ ಜೆ,ಶಾಫಿ ಕುತ್ತ ಮಟ್ಟೆ ,ಶಹೀದ್ ಪಾರೆ, ನಗರ ಪಂಚಾಯತ್ ಸದಸ್ಯರುಗಳಲ್ಲಿ ಶಶಿಕಲಾ ನೀರ ಬಿದ್ರೆ, ಕಿಶೋರಿ ಶೇಟ್,ಬುದ್ಧ ನ್ಯಾಕ್, ಸುಧಾಕರ ಕೇರ್ಪಳ, ಬಾಲಕೃಷ್ಣ ರೈ, ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು ಮೊದಲಾದವರು ಉಪಸ್ಥಿತರಿದ್ದರು.