ಪಂಜ ಗ್ರಾ.ಪಂ: ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮ

0

ಕರ್ನಾಟಕ ಸರಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಅನುಷ್ಠಾನ ಕಾರ್ಯಕ್ರಮ ಇಂದು ರಾಜ್ಯದಾದ್ಯಂತ ಅನುಷ್ಠಾನಗೊಳ್ಳಲಿರುವ ಹಿನ್ನೆಲೆಯಲ್ಲಿ ಪಂಜ ಗ್ರಾ.ಪಂ.ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಪ್ರೋಜೆಕ್ಟರ್ ಮುಖಾಂತರ ನೋಡುವ ವ್ಯವಸ್ಥೆ ಮಾಡಲಾಗಿತ್ತು. ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಕಲ್ಕ ದೀಪ ಬೆಳಗಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ಉಪಾಧ್ಯಕ್ಷರಾದ ನಾರಾಯಣ ಕೃಷ್ಣನಗರ,

ಮಾಜಿ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಮಾಜಿ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ, ಸದಸ್ಯರಾದ ಲಕ್ಷ್ಮಣ ಗೌಡ ಬೊಳ್ಳಾಜೆ, ಶ್ರೀಮತಿ ಮಲ್ಲಿಕಾ , ಶ್ರೀಮತಿ ವೀಣಾ ಪಂಜ, ಶ್ರೀಮತಿ ದಿವ್ಯಾ ಪುಂಡಿಮನೆ,

ಶ್ರೀಮತಿ ಪ್ರಮೀಳಾ ಸಂಪ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿ ರೈ,ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಊರವರು,ಫಲಾನುಭವಿಗಳು ಪಾಲ್ಗೊಂಡಿದ್ದರು.
ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಸಹಕರಿಸಿದರು.

ಕಾರ್ಯಕ್ರಮದಲ್ಲಿ ನಾರಾಯಣ ಕೃಷ್ಣನಗರ ಸ್ವಾಗತಿಸಿದರು.ಶ್ರೀಮತಿ ಚಂದ್ರಾವತಿ ರೈ ನಿರೂಪಿಸಿದರು.ಶ್ರೀಮತಿ ಪೂರ್ಣಿಮಾ ದೇರಾಜೆ ವಂದಿಸಿದರು.