ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಬೆಂಗಳೂರು ಇವರು ನಡೆಸುವ ರಾಜ್ಯಮಟ್ಟದ ಡ್ರಾಯಿಂಗ್ ಗ್ರೇಡ್ ಲೋವರ್ ಪರೀಕ್ಷೆಯಲ್ಲಿ ಸವನೂ ರಿನ ವಿದ್ಯಾರಶ್ಮಿ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿನಿ ಕು. ಅಪೂರ್ವ ಗೋಕುಲ್ ದಾಸ್ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಸವನೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ವಿದ್ಯಾರಶ್ಮಿ ವಿದ್ಯಾಲಯದ ಪೋಷಕರ ಸಭೆಯಲ್ಲಿ ಶಾಲೆಯ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಇವರು ಪ್ರಮಾಣ ಪತ್ರ ವಿತರಿಸಿದರು.ಇವರು ಸುಳ್ಯದ ಸಾಮಾಜಿಕ ಮುಂದಾಳು ಕೆ. ಗೋಕುಲ್ ದಾಸ್ ರವರ ಪುತ್ರಿ.