ಅಯ್ಯನಕಟ್ಟೆಯಿಂದ ಕಳಂಜ ಕಡೆಗೆ ತಿರುಗುವ ಜಂಕ್ಷನ್ ನಲ್ಲಿ ರಸ್ತೆ ಬದಿಯಲ್ಲೇ ಅಪಾಯಕಾರಿ ಹೊಂಡ ನಿರ್ಮಾಣಗೊಂಡಿದೆ.
ಮೋರಿ ಇರುವ ಜಾಗದಲ್ಲಿ ಹೊಂಡ ನಿರ್ಮಾಣವಾಗಿದ್ದು,
5ರಿಂದ 6 ಫೀಟ್ ಆಳವಾಗಿದೆ. ಮೋರಿ ನಿರ್ಮಾಣ ಮಾಡುವಾಗ ಹಾಕಿದ ಮಣ್ಣು ಮೋರಿ ಪೈಪು ಅಳವಡಿಸಿದ ಭಾಗದಲ್ಲಿ ನೀರಿನಲ್ಲಿ ತೊಳೆದು ಹೋಗಿ ಈ ಹೊಂಡ ನಿರ್ಮಾಣವಾಗಿದೆ. ಘನ ವಾಹನಗಳು ಕಳಂಜ, ಚೊಕ್ಕಾಡಿ ರಸ್ತೆಗೆ ತಿರುಗುವಾಗ ಎಡ ಭಾಗದ ಚಕ್ರ ಹೊಂಡಕ್ಕೆ ಇಳಿಯುವ ಸಾಧ್ಯತೆ ಇದ್ದು,
ವಾಹನ ಚಾಲಕರು ಎಚ್ಚರಿಕೆಯಿಂದಿರಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಅಪಾಯ ಎದುರಾಗುವ ಮುನ್ನ ಈ ಕಡೆ ಗಮನ ಹರಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.