ಮಡಪ್ಪಾಡಿ ಪ್ರಾ.ಕೃ.ಪ.ಸ.ಸಂಘದ ‌ಮಹಾಸಭೆ

0

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸಹಕಾರಿ ಸಂಘದ ಅಧ್ಯಕ್ಷ ಪಿ.ಸಿ.ಜಯರಾಮರವರ ಅಧ್ಯಕ್ಷತೆಯಲ್ಲಿ ಮಡಪ್ಪಾಡಿ ಯುವಕ‌ ಮಂಡಲದ ಸಭಾಭವನದಲ್ಲಿ ನಡೆಯಿತು.


ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾಗತಿಸಿದರು. ನಿರ್ದೇಶಕ ಸೋಮಶೇಖರ ಕೇವಳ ಸಾಧಕ ವಿದ್ಯಾರ್ಥಿ ಗಳ ಮತ್ತು ಅತೀ ಹೆಚ್ವು ವ್ಯವಹರಿಸಿದವರ ಪಟ್ಟಿ‌ ಓದಿ‌ ಹೇಳಿದರು. ಉಪಾಧ್ಯಕ್ಷ ಮಿತ್ರದೇವ ಮಡಪ್ಪಾಡಿ‌ ವಂದಿಸಿದರು.‌


ವೇದಿಕೆಯಲ್ಲಿ ನಿರ್ದೇಶಕ ರುಗಳಾದ ಅಜಯ್ ವಾಲ್ತಾಜೆ, ರಾಜಕುಮಾರ ಪೂಂಬಾಡಿ, ಶ್ರೀಮತಿ ಪ್ರವೀಣ ಯತೀಂದ್ರನಾಥ, ಶ್ರೀಮತಿ ಕುಂಞಕ್ಕ ಸಿ.ಯಚ್., ಪೇರಪ್ಪ‌ ಮಲೆ, ಶೇಖರ‌ ಕಜೆ ಉಪಸ್ಥಿತರಿದ್ದರು. ‌

ಈ ಬಾರಿ ರೂ.126.83 ಕೋಟಿ ವ್ಯವಹಾರ ನಡೆಸಿ, 33.23 ಲಕ್ಷ ಲಾಭ ಗಳಿಸಿ ಶೇ.10 ಡಿವಿಡೆಂಟ್‌ನ್ನು ಸದಸ್ಯರಿಗೆ ವಿತರಿಸಲಾಗುವುದು ಎಂದು ಘೋಷಿಸಿದರು.