ಕಾಂಗ್ರೆಸ್ ಸರಕಾರದಿಂದ ರೈತ ವಿರೋಧ ನಿಲುವು : ಬಿಜೆಪಿ ಆಕ್ಷೇಪ

0


ಸೆ.11 ರಂದು ರೈತ ಮೋರ್ಚಾ ವತಿಯಿಂದ ಸುಳ್ಯದಲ್ಲಿ ಪ್ರತಿಭಟನೆ


ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿಯ ಬರ : ಪ್ರತಾಪ್ ಸಿಂಹ ನಾಯಕ್

ಬಿಜೆಪಿ ಸರಕಾರ ರಾಜ್ಯದ ರೈತರಿಗೆ, ವಿದ್ಯಾರ್ಥಿಗಳಿಗೆ, ಜನರಿಗಾಗಿ ಸುಮಾರು ೧೮ ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು. ಆದರೆ ಈಗ ರಾಜ್ಯದ ಕಾಂಗ್ರೆಸ್ ಸರಕಾರ ಅದನ್ನು ಹಿಂಪಡೆದು ಜನರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಸರಕಾರದ ವಿರುದ್ಧ ಸೆ.೧೧ ರಂದು ಸುಳ್ಯ ತಾಲೂಕು ಕಚೇರಿ ಎದುರು ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು.


ಸೆ.೯ ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿಜೆಪಿ ಸರಕಾರ ರಾಜ್ಯದ ಜನರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಪಿ.ಎಂ. ಕಿಸಾನ್ ಯೋಜನೆ ಯಲ್ಲಿ ವರ್ಷಕ್ಕೆ ೬ ಸಾವಿರ ನೀಡುವಾಗ ರಾಜ್ಯ ಸರಕಾರ ೪ ಸಾವಿರ ನೀಡುತಿತ್ತು. ಆದರೆ ಈ ಸರಕಾರ ರಾಜ್ಯ ನೀಡುತ್ತಿದ್ದ ಹಣವನ್ನು ತಡೆದಿದೆ. ರೈತ ವಿದ್ಯಾರ್ಥಿ ನಿಧಿಯನ್ನು ಸೇರಿದಂತೆ ೧೮ ಕಾರ್ಯಕ್ರಮವನ್ನು ತಡೆದಿದೆ ಎಂದು ಹೇಳಿದರು.


ಬಿಜೆಪಿಯಿಂದ ತಯಾರಿ
ಲೋಕಸಭಾ ಚುನಾವಣೆಯ ಕೆಲಸ ಕಾರ್ಯಗಳು ಪಕ್ಷದೊಳಗೆ ನಡೆಯುತ್ತಿದೆ. , ಸಾಮಾಜಿಕ ಜಾಲತಾಣಗಳನ್ನು ಒಳಗೊಂಡಂತೆ ಬೂತ್ ಮಟ್ಟದ ವರೆಗೆ ಪಕ್ಷ ಸಂಘಟನಾತ್ಮಕಗೊಳಿಸುವ ನಿಟ್ಟಿನಲ್ಲಿ ಸಭೆಗಳು ನಡೆದಿದೆ. ನಮಗೆ ವಿಶ್ವಾಸ ಇದೆ. ಕಳೆದ ೯ ವರ್ಷದಲ್ಲಿ ಕೇಂದ್ರ ಸರಕಾರದ ಸಾಧನೆಯನ್ನು ದೇಶದ ಜನರು ಮೆಚ್ಚಿದ್ದಾರೆ. ಮೋದಿಯವರ ಸರಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಬೆಳಕು ತರುವಂತ ಯೋಜನೆಯನ್ನು ನೀಡಿದೆ. ಆದ್ದರಿಂದ ಮೂರನೇ ಅವಧಿಯಲ್ಲಿಯೂ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ. ಆ ನಿಟ್ಟಿನಲ್ಲಿ ತಯಾರಿಗಳು ನಡೆಯುತ್ತಿದೆ.
ರಾಜ್ಯದಲ್ಲಿ ಅಭಿವೃದ್ಧಿಯ ಬರ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ೧೦೦ ದಿನಗಳಾಗಿವೆ. ೫ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಆಸೆ ಹುಟ್ಟಿಸಿ ಅಧಿಕಾರಕ್ಕೆ ಕಾಂಗ್ರೆಸ್ ಬಂದಿದೆ. ರಾಜ್ಯದಲ್ಲಿ ಮಳೆಯ ಕಾರಣದಿಂದ ಬರ ಒಂದೆಡೆಯಾದರೆ, ಗ್ಯಾರಂಟಿ ಜಾರಿ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿಗೆ ಅನುದಾನವನ್ನು ನೀಡದೆ ಅಭಿವೃದ್ಧಿಯ ಬರವನ್ನು ರಾಜ್ಯ ಎದುರಿಸುತ್ತಿದೆ. ೫ ಗ್ಯಾರಂಟಿಯಲ್ಲಿ ಇನ್ನೂ ಕೂಡಾ ಯುವ ಜನರಿಗೆ ನೀಡಿದ ಘೋಷಣೆಯನ್ನು ಜಾರಿ ಮಾಡಿಲ್ಲ ಎಂದ ಅವರು, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಇಟ್ಟ ೧೧ ಸಾವಿರ ಕೋಟಿ ರೂ ವನ್ನು ಕೂಡಾ ಗ್ಯಾರಂಟಿಗಾಗಿ ಬಳಕೆ ಮಾಡಿ ಆ ಸಮಾಜಕ್ಕೂ ಅನ್ಯಾಯ ಮಾಡಿದೆ ಎಂದು ಹೇಳಿದರು. ೨೦೦ ಯುನಿಟ್ ವಿದ್ಯುತ್ ಕೊಡುತ್ತೇವೆ ಎಂದಿದ್ದಾರೆ. ಆದರೆ ಕಾಂಗ್ರೆಸ್ ಸರಕಾರ ವಿದ್ಯುತ್ ಉತ್ಪಾದನೆಯ ಕುರಿತು ಯೋಚಿಸದೆ ಈಗಲೇ ಲೋಡ್ ಶೆಡ್ಡಿಂಗ್ ಆರಂಭ ಮಾಡಿದ್ದಾರೆ. ದಿನಕ್ಕೆ ೩ ಗಂಟೆ ವಿದ್ಯುತ್ ನೀಡಲೂ ಈ ಸರಕಾರಕ್ಕೆ ಸಾಧ್ಯ ಆಗುತ್ತಿಲ್ಲ.
೧೧೦ ಕೆ.ವಿ. ತಾಂತ್ರಿಕ ಕಾರಣ : ಕಂಜಿಪಿಲಿ
ಸುಳ್ಯಕ್ಕೆ ೧೧೦ ಕೆ.ವಿ. ವಿದ್ಯುತ್ ಸಬ್‌ಸ್ಟೇಷನ್ ನಮ್ಮ ಸರಕಾರ ಮಂಜೂರು ಮಾಡಿ, ಟೆಂಡರ್ ಆಗಿದೆ. ಕೆಲವು ಟೆಕ್ನಿಕಲ್ ಸಮಸ್ಯೆ ಇದ್ದು ಕಾಲ ಕಾಲಕ್ಕೆ ನಮ್ಮ ಶಾಸಕರು ಕೆ.ಪಿ.ಟಿ.ಸಿ.ಎಲ್. ಅಧಿಕಾರಿಗಳನ್ನು ಕರೆದು ವಿವರ ಪಡೆಯುತ್ತಿದ್ದಾರೆ. ಆದರೆ ಕಾಂಗ್ರೆಸ್ ನವರು ಈಗ ೧೧೦ ಕೆ.ವಿ. ನಾವು ತಂದದ್ದು ಎಂದು ಹೇಳುತ್ತಿದ್ದಾರೆ ಎಂದ ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿಯವರು, ರಾಮಯ್ಯ ಗೌಡರ ಸ್ಮಾರಕಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಲ್ಲಿಯ ಶಾಸಕರು, ಸಚಿವರ ಒತ್ತಾಸೆಯಿಂದ ಇಲಾಖೆಯ ಆಗಿನ ಸಚಿವರಾದ ಸುನಿಲ್ ಕುಮಾರ್ ರವರು ರೂ. ೩೦ ಲಕ್ಷ ಬಿಡುಗಡೆ ಮಾಡಿದ್ದರು. ಈಗ ಕಾಂಗ್ರೆಸ್ಸಿಗರು ಅದನ್ನು ನಾವು ಮಾಡಿದ್ದು ಎಂದು ಹೇಳುತ್ತಿದ್ದಾರೆ. ಯಾರಿಗೂ ಹುಟ್ಟಿದ ಮಗುವಿಗೆ ಅವರು ಅಪ್ಪ ಆಗುವುದು ಬೇಡ. ಅವರೇ ಅನುದಾನ ತರಿಸಿ ನಾವು ತರಿಸಿದ್ದು ಎಂದು ಹೇಳಲಿ ಎಂದು ಕಂಜಿಪಿಲಿ ಹೇಳಿದರು.
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಮದು ೧೦೫ ದಿನ ಆಗಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಏನು ಯೋಜನೆ ಕೊಟ್ಟಿದ್ದಾರೆ. ಕಾಂಗ್ರೆಸ್ಸಿಗರು ಹೇಳಲಿ. ನಿಜವಾಗಿ ಅವರು ಅನುದಾನ ತರಿಸಿದ್ದರೆ ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಪ್ರಮುಖರಾದ ಬೂಡಿಯಾರ್ ರಾಧಾಕೃಷ್ಣ, ಕಸ್ತೂರಿ ಪಂಜ, ಸುಭೊದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಕೃಷ್ಣ ಶೆಟ್ಟಿ ಕಡಬ, ದೇವದಾಸ ಶೆಟ್ಟಿ ಬಮಟ್ವಾಳ, ರಮೇಶ್ ಕಲ್ಪುರೆ ಮೊದಲಾದವರಿದ್ದರು.