ರೋಟರಿ ಶಾಲಾ ಪ್ರಿನರ್ಸರಿ, ನರ್ಸರಿ ವಿದ್ಯಾರ್ಥಿಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ ಪ್ರದರ್ಶನ

0

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ರೋಟರಿ ಪ್ರಿನರ್ಸರಿ, ನರ್ಸರಿ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಈ ಪ್ರದರ್ಶನದಲ್ಲಿ ಪುಟ್ಟ ಪುಟ್ಟ ಮಕ್ಕಳು ಮುದ್ದು ಕೃಷ್ಣ ವೇಷ, ರಾಧೆ ವೇಷ ಇತ್ಯಾದಿಗಳನ್ನು ಹೆತ್ತವರ/ಪೋಷಕರ ಸಹಕಾರ ದೊಂದಿಗೆ ಪ್ರದರ್ಶನ ನೀಡಿದರು. ಮಕ್ಕಳು ಶ್ಲೋಕ, ಪದ್ಯ, ಕಥೆ, ಭಾಷಣ ಮಾಡುವ ಮೂಲಕ,ನೃತ್ಯ ಮಾಡುವ ಮೂಲಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಕಾರ್ಯಕ್ರಮ ದ ಉದ್ದಗಲಕ್ಕೂ ಮಕ್ಕಳ ಪೋಷಕರು ಸಹಕಾರ ನೀಡಿದರು. ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸಲು, ಧೈರ್ಯ ತುಂಬಲು ಇಂತಹ ಕಾರ್ಯಕ್ರಮಗಳು ಸಹಕಾರವಾಗಲಿದೆ ಎಂದು ಕಾರ್ಯಕ್ರಮದ ಸಂಘಟಕರು, ಮುಖ್ಯ ಶಿಕ್ಷಕರು ಆದ ಶ್ರೀಮತಿ ಹರಿಣಾಕ್ಷಿ ಕೆ. ಎಸ್. ರವರು ಎಲ್ಲರನ್ನು ಸ್ವಾಗತಿಸಿ,ಪ್ರಸ್ತಾವನೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಿ -ನರ್ಸರಿ ಶಿಕ್ಷಕಿ ಶ್ರೀಮತಿ ಸಂಗೀತ ಕುಮಾರಿ , ನರ್ಸರಿ ಶಿಕ್ಷಕರಾದ ಶ್ರೀಮತಿ ವಿಜಯಲಕ್ಷ್ಮಿ ಕೆ., ಶ್ರೀಮತಿ ಮಲ್ಲಿಕಾ ಕೆ.,ಶ್ರೀಮತಿ ಸವಿತಾ ಭಟ್ ರವರು ಸಹಕಾರ ನೀಡಿದರು. ನರ್ಸರಿ ಮಕ್ಕಳ ಸಹಾಯಕಿ ಶ್ರೀಮತಿ ಕಾವ್ಯ ಪಿರವರು ಜೊತೆಗಿದ್ದು ಸಹಕರಿಸಿದರು.ಸಹಶಿಕ್ಷಕಿಯರಾದ .ಶ್ರೀಮತಿ ಶೋಭಾ ಎ. ಬಿ.ರವರು ಕಾರ್ಯಕ್ರಮ ನಿರೂಪಣೆ ಮಾಡಿ, ವಂದಿಸಿದರು.ಸಹಶಿಕ್ಷಕಿ ಶ್ರೀಮತಿ ರಶ್ಮಿ ಎಸ್. ಎನ್. ರವರು ಸಹಕರಿಸಿದರು.ಚಟುವಟಿಕೆಗಳ ಪ್ರದರ್ಶನ ನೀಡಿದ ಮಕ್ಕಳಿಗೆ ರೋಟರಿ ಶಾಲೆ ವತಿಯಿಂದ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.