ಕೆನರಾ ಬ್ಯಾಂಕ್ ಜುಬಿಲಿ ಶಿಕ್ಷಣ ನಿಧಿಯಿಂದ ವಿದ್ಯಾ ಸಹಾಯ ವಿದ್ಯಾರ್ಥಿ ವೇತನವನ್ನು ಸೆಪ್ಟೆಂಬರ್ 8 ರಂದು ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಸರ್ಕಾರಿ ಕಾಲೇಜುಗಳಲ್ಲಿ ಎಸ್.ಎಸ್.ಎಲ್.ಸಿ. ಅಥವಾ ಪ್ರಥಮ ಪಿಯುಸಿ ಓದಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿರುವ ಪಿಯುಸಿ ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿ ವೇತನವನ್ನು ಪ್ರತಿ ವರ್ಷ ನೀಡಲಾಗುತ್ತದೆ. ಈ ವರ್ಷ ನಮ್ಮ ಸಂಸ್ಥೆಯ ಒಟ್ಟು 07 ವಿದ್ಯಾರ್ಥಿನಿಯರು-ರಶ್ಮಿ ಕೆ.ಎಸ್. ನೆನುಮೋಲ್ ಕೆ ಎಮ್, ಚೈತ್ರ ಎ ಕೆ ಸಾಕ್ಷಿ ಎನ್ ಪಿ, ಪರಮೇಶ್ವರಿ ಕೆ ಕೃತಿ ಎನ್.ಪಿ., ಯಶ್ಚಿತಾ ಎ ವಿದ್ಯಾರ್ಥಿ ವೇತನಕ್ಕೆ ಆಯ್ಕೆಗೊಂಡಿದ್ದು ಕೆನರಾ ಬ್ಯಾಂಕ್ ನ ನಿವೃತ್ತ ಜನರಲ್ ಮೆನೇಜರ್ ಶ್ರೀ ವೆಂಕಟೇಶ ಪ್ರಭುಗಳು ತಲಾ ರೂ. 2000 ಮೊತ್ತದ 7 ಚೆಕ್ ಗಳನ್ನು ವಿದ್ಯಾರ್ಥಿನಿಯರಿಗೆ ವಿತರಿಸಿದರು.
ಬಳಿಕ ಮಾತನಾಡಿದ ಅವರು ಮುಂದಿನ ದಿವಸಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಗಳಲ್ಲಿ ವಿದ್ಯಾರ್ಥಿನಿಯರು ವಿದ್ಯಾರ್ಥಿವೇತನ ವನ್ನು ಪಡೆದು ತಮ್ಮ ವಿದ್ಯಾಭ್ಯಾಸಕ್ಕೆ ಈ ಹಣವನ್ನು ಬಳಕೆ ಮಾಡುವಂತೆ ಸೂಚಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕೆನರಾ ಬ್ಯಾಂಕಿನ ನಿವೃತ್ತ ಮೆನೇಜರ್ ರಾಮಚಂದ್ರ ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯೆ ಶ್ರೀಮತಿ ಗಾಯತ್ರಿ ಯವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಮೋಹನ ಗೌಡ ಬೊಮ್ಮೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಹಿರಿಯ ಉಪನ್ಯಾಸಕಿ ಶ್ರೀಮತಿ ಹಸೀನಾಬಾನು ವಂದಿಸಿದರು. ವಿದ್ಯಾರ್ಥಿನಿಯರಾದ ಕು.ಹಂಸಿನಿ, ಕು.ಕಾವ್ಯಶ್ರೀ,
ಕು.ಹರ್ಷಿತ ಪ್ರಾರ್ಥಿಸಿದರು.