ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಪಂಜ, ಯುವಜನ ಸಂಯುಕ್ತ ಮಂಡಳಿ ಸುಳ್ಯ, ಮತ್ತು ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಪಂಜ ಇವರ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟವು ಸೆ.24 ರಂದು ಪಂಜದ ಸರಕಾರಿ ಪದವಿ ಪೂರ್ವ ಕಾಲೇಜಿನ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ. ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
ಯೋಗ ಕ್ರೀಡಾ ಸ್ಪರ್ಧೆಯು ಸೆ.22 ರಂದು ಪೂ.10.00 ಕ್ಕೆ ಸುಳ್ಯ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆಯಲಿದೆ. ಸೆ.24 ರಂದು ಅಥ್ಲೆಟಿಕ್ಸ್ ಪುರುಷರಿಗೆ ಮತ್ತು ಮಹಿಳೆಯರಿಗೆ ನಡೆಯಲಿದೆ. 100 ಮೀ ಓಟ, 200 ಮೀ ಓಟ, 400 ಮೀ ಓಟ, 800 ಮೀ ಓಟ, 1500 ಮೀ.ಓಟ, (5000 ಮೀ ಓಟ ಪುರುಷರಿಗೆ ಮಾತ್ರ) ಜಾವಲಿನ್, ಶಾಟ್ ಫುಟ್, ಉದ್ದಜಿಗಿತ, ಎತ್ತರ ಜಿಗಿತ, ಡಿಸ್ಕಸ್ ಎಸೆತ, ತ್ರಿಬಲ್ ಜಂಪ್, 4100 ರಿಲೇ, 4400 ರಿಲೇ (3000 ಮೀ ಓಟ ಮಹಿಳೆಯರಿಗೆ ಮಾತ್ರ) ಸ್ಪರ್ಧೆಗಳು ನಡೆಯಲಿದೆ.
ಫುಟ್ಬಾಲ್ ಪಂದ್ಯಾಟವು ಪುರುಷರಿಗೆ ಮಾತ್ರ ಸುಳ್ಯ ಯುನೈಟೆಡ್ ಫುಟ್ ಬಾಲ್ ಕ್ಲಬ್ ಇದರ ಆಶ್ರಯದಲ್ಲಿ ಗಾಂಧಿನಗರ ಶಾಲಾ ಕ್ರೀಡಾಂಗಣದಲ್ಲಿ ಸೆ.24 ರಂದು
ನಡೆಯಲಿದೆ.
ಭಾಗವಹಿಸುವ ಸ್ಪರ್ಧಾಳುಗಳು ಪೂರ್ವಾಹ್ನ 8.30 ರ ಒಳಗಾಗಿ ಸ್ಥಳದಲ್ಲಿ ವರದಿ ಮಾಡಿಕೊಳ್ಳಬೇಕು. ನಂತರ ಬಂದ ಯಾವುದೇ ತಂಡಗಳಿಗೆ ಅವಕಾಶವಿಲ್ಲ. ಸ್ಪರ್ಧೆಗಳು ಸರಿಯಾಗಿ ಪೂರ್ವಾಹ್ನ 8.30 ಕ್ಕೆ ಪ್ರಾರಂಭಗೊಳ್ಳುತ್ತದೆ. ದಸರಾ ಕ್ರೀಡಾಕೂಟದ ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಹ್ಯಾಂಡ್ ಬಾಲ್, ಹಾಕಿ, ಈಜು, ಟಿ.ಟೆನ್ನಿಸ್, ವೈಯ್ಟ್ ಲಿಫ್ಟಿಂಗ್ ಮತ್ತು ಪವರ್ ಲಿಫ್ಟಿಂಗ್ ಸ್ಪರ್ಧೆಗಳನ್ನು ನೇರವಾಗಿ ಜಿಲ್ಲಾ ಮಟ್ಟದಲ್ಲಿ ನಡೆಸಲಾಗುವುದು. ಹೆಚ್ಚಿನ ವಿವರಗಳಿಗೆ ದೇವರಾಜ್ ಮುತ್ಲಾಜೆ ನೋಡೆಲ್ ಅಧಿಕಾರಿ ಯುವಜನ ಸೇವಾ ಕ್ರೀಡಾ ಇಲಾಖೆ ಇವರನ್ನು ಸಂಪರ್ಕಿಸಬಹುದು.