ಪೆರುವಾಜೆ ಡಾ. ಕೆ. ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

0

ಬಿ.ಎ. ಶೇಕಡಾ 100 – ಬಿ.ಕಾಂ. 72.41 – ಬಿ.ಎಸ್.ಡಬ್ಲ್ಯೂ 86.66 ಫಲಿತಾಂಶ

ಪೆರುವಾಜೆ ಡಾ. ಕೆ. ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 2021-2022ನೇ ಸಾಲಿನಲ್ಲಿ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿ
ಬಿ.ಎ. ಬಿ.ಕಾಂ. ಮತ್ತು ಬಿ.ಎಸ್.ಡಬ್ಲ್ಯೂ ಕೋರ್ಸುಗಳಿದ್ದು, ಬಿ.ಎ. ಶೇ. 100 ಫಲಿತಾಂಶ, ಬಿ.ಕಾಂ‌. ಶೇ.72.41 ಹಾಗೂ ಬಿ.ಎಸ್.ಡಬ್ಲ್ಯೂ. ಶೇ.86.66 ಫಲಿತಾಂಶ ದಾಖಲಾಗಿದೆ.

ಬಿ.ಎ. ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 16 ಮಂದಿ ವಿದ್ಯಾರ್ಥಿಗಳಲ್ಲಿ ಎಲ್ಲರು ಉತ್ತೀರ್ಣರಾಗಿದ್ದು, 11 ಮಂದಿ ಡಿಸ್ಟಿಂಕ್ಷನ್, 4 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ರಂಜಿತ್ ಎಂ.ಸಿ. 709 ಅಂಕ ಶಮಿತ ಜಿ.ಕೆ. 703 ಅಂಕ, ಪ್ರವೀಣ ಡಿ. 674 ಅಂಕ, ಎ. ಅರುಣಾ ಕುಮಾರಿ 664 ಅಂಕ ,ಚೈತ್ರ ಪಿ.ಎಲ್. 664 ಅಂಕ , ವಿಜಯಲಕ್ಷ್ಮಿ ಎಂ. 662 ಅಂಕ, ಸ್ಮಿತ ಬಿ.ಎಸ್. 649 ಅಂಕ , ನಿಖಿತ ಕೆ. 649 ಅಂಕ, ಜಿತೇಂದ್ರ ಎನ್.630 ಅಂಕ , ಉಷಾ ಸಿ 643 ಅಂಕ , ಮೇಘಶ್ರೀ 630 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.

ಬಿ.ಕಾಂ. ವಿಭಾಗದಲ್ಲಿ ಒಟ್ಟು 29 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 21 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 9 ಮಂದಿ ಡಿಸ್ಟಿಂಕ್ಷನ್, 7 ಮಂದಿ ಪ್ರಥಮ ಶ್ರೇಣಿಯಲ್ಲಿ ಹಾಗೂ 4 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಕ್ರಮ್ ಬಿ.ಎಸ್. 809 ಅಂಕ, ಮನೋಜ್ ಕೆ. 731 ಅಂಕ , ನವಜೀತ್ ಜೆ 728 ಅಂಕ , ಚೈತನ್ಯ ಎಸ್. 722 ಅಂಕ, ನಿತ್ಯಶ್ರೀ 711 ಅಂಕ, ಸಂಗೀತ ಎ. 700 ಅಂಕ , ಕೃತೀಕ್ ಕುಮಾರ್ 693 ಅಂಕ, ಶಿಲ್ಪ ಪಿ.ಎಂ. 689 ಅಂಕ, ಹರ್ಷಿತ ಎಲ್.ಡಿ. 680 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.

ಬಿ.ಎಸ್.ಡಬ್ಲ್ಯೂ. ವಿಭಾಗದಲ್ಲಿ ಒಟ್ಟು 15 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 13 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ, 7 ಮಂದಿ ಡಿಸ್ಟಿಂಕ್ಷನ್ ಹಾಗೂ 6 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ನವ್ಯ ಎಚ್. 704 ಅಂಕ, ನವ್ಯ ಪಿ. 704 ಅಂಕ, ಸುಮಲತಾ ಬಿ.ಕೆ. 696 ಅಂಕ, ಕಿರಣ್ ರಾಜ್ 658 ಅಂಕ, ರಶ್ಮಿತ ಬಿ.ಟಿ. 646 ಅಂಕ, ಲತಾಕುಮಾರಿ ಕೆ. 642 ಅಂಕ, ನಿಶ್ಮಿತ ಎಚ್.ಎಲ್.641 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.