ನಡುಗಲ್ಲು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿಯ ಮಕ್ಕಳು ಶಿಕ್ಷಕರ ದಿನಾಚರಣೆ ಸೆ.15 ರಂದು ಆಚರಿಸಿದರು. ಪ್ರಾರಂಭದಲ್ಲಿ ಶಿಕ್ಷಕರನ್ನು ಪುಷ್ಪಾರ್ಚನೆ ಮಾಡುವ ಮೂಲಕ ವೇದಿಕೆಗೆ ಬರಮಾಡಿಕೊಂಡರು.

ಬೇರೆ ಬೇರೆ ವಿದ್ಯಾರ್ಥಿಗಳುಶಿಕ್ಷಕ ರಿಗೆ ಶಿಕ್ಷಕರನ್ನು ಕಿರು ಕಾಣಿಕೆ ನೀಡಿ ಸತ್ಕರಿಸಿದರು. ಶಿಕ್ಷಕರಿಗೆ ರಸಪ್ರಶ್ನೆ, ಲಕ್ಕಿ ಗೇಮ್, ಪದ್ಯ ಬಂಡಿ, ಮೊದಲಾದ ಸ್ಪರ್ಧೆಗಳ ಏರ್ಪಡಿಸಿ ಶಿಕ್ಷಕರ ದಿನಾಚರಣೆಯನ್ನು ಅರ್ಥವತ್ತಾಗಿ ಆಚರಿಸಲು ಎಲ್ಲಾ ವಿದ್ಯಾರ್ಥಿಗಳು ಪೋಷಕರು ಸಹಕರಿಸಿದ್ದರು. ವಿದ್ಯಾರ್ಥಿಗಳಿಂದಲೇ ಕಾರ್ಯಕ್ರಮ ನಿರ್ವಹಣೆ, ಪ್ರಾರ್ಥನೆ,ಸ್ವಾಗತ, ಉದ್ಘಾಟನೆ, ಅನಿಸಿಕೆ ವ್ಯಕ್ತಪಡಿಸಿದರು.