ಜಾಲ್ಸೂರು ಗ್ರಾಮ ಮಟ್ಟದ “ಪೌಷ್ಟಿಕಾಹಾರ ಸಪ್ತಾಹ” ಕಾರ್ಯಕ್ರಮ ಮತ್ತು “ವರಲಕ್ಷ್ಮಿ” ಗೊಂಚಲು ಸಮಿತಿಯ ಸಭೆಯನ್ನು ಸೆ.20ರಂದು ಜಾಲ್ಸೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ವೇದಿಕೆಯಲ್ಲಿ ಸ್ತ್ರೀ ಶಕ್ತಿ ಗೊಂಚಲು ಸಮಿತಿಯ ಅಧ್ಯಕ್ಷೆ ಶ್ರೀಮತಿ ಶೋಭಿತಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮಿಳಾ, ಆಪ್ತ ಸಮಾಲೋಚಕಿ ಶ್ರೀಮತಿ ಸುಜಾತ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ.ಯಂ, ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ. ಎ. ಎಲ್, ಸ್ತ್ರೀ ಶಕ್ತಿ ಗೊಂಚಲಿನ ಉಪಾಧ್ಯಕ್ಷೆ ಶ್ರೀಮತಿ ರಾಧಿಕಾ, ಕಾರ್ಯದರ್ಶಿ ಶ್ರೀಮತಿ ಸುಮಂಗಲಿ, ಗ್ರಾಮ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಜಲಜಾಕ್ಷಿ ಪಿ.ಕೆ, ಶ್ರೀಮತಿ ರಚನಾ, ಶ್ರೀಮತಿ ತಿಲಕ, ಜಿಲ್ಲಾ ಬ್ಲಾಕ್ ಸೊಸೈಟಿ ಸದಸ್ಯೆ ಶ್ರೀಮತಿ ಪ್ರಸನ್ನ ಕುಮಾರಿ, ತಾಲೂಕು ಬ್ಲಾಕ್ ಸೊಸೈಟಿ ಸದಸ್ಯೆ ಶ್ರೀಮತಿ ಸುಮತಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ ಉದ್ಘಾಟಿಸಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ‘ಆರೋಗ್ಯ ಮತ್ತು ಪೌಷ್ಟಿಕ ಆಹಾರ’ದ ಬಗ್ಗೆ ಮಾಹಿತಿಯನ್ನು ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ ಮಹಿಳೆಯರಿಗೆ ‘ಗೃಹಲಕ್ಷ್ಮಿ ಯೋಜನೆ’ಯ ಬಗ್ಗೆ ಮಾಹಿತಿ ನೀಡಿದರು.
ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಮತ್ತು ಅಂಗನವಾಡಿ ಮಕ್ಕಳ ಪೋಷಕರು ವಿವಿಧ ಬಗೆಯ ಪೌಷ್ಟಿಕಾಹಾರವನ್ನು ತಯಾರಿಸಿದ್ದರು. ಎಲ್ಲರಿಗೂ ಸ್ತ್ರೀ ಶಕ್ತಿ ಗೊಂಚಲು ಸಮಿತಿಯ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು. ನಂತರ ವೇದಿಕೆಯಲ್ಲಿರುವ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಮಕ್ಕಳ ಪೋಷಕರು ಮತ್ತು ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀಮತಿ ಹರಿಣಾಕ್ಷಿ ಮಹಾಬಲಡ್ಕ ಪ್ರಾರ್ಥಿಸಿ, ಶ್ರೀಮತಿ ಗೀತಾ ಗೋಪಿನಾಥ್ ಸ್ವಾಗತಿಸಿ, ಶ್ರೀಮತಿ ಮಲ್ಲಿಕಾ ವಂದಿಸಿ, ಕೋನಡ್ಕಪದವು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಿವೇದಿತಾ ಕಾರ್ಯಕ್ರಮವನ್ನು ನಿರೂಪಿಸಿದರು.