ಶ್ರೀ ಶಾರದಾಂಬಾ ಸೇವಾ ಸಮಿತಿ ದರ್ಖಾಸ್ತು ವತಿಯಿಂದ 18 ನೇ ವರ್ಷದ ಶ್ರೀ ಶಾರದೋತ್ಸವವು ಅ.23 ಮತ್ತು ಅ.24 ರಂದು ದರ್ಖಾಸ್ತು ಶಾಲಾ ಅಕ್ಷಯ ರಂಗಮಂದಿರದಲ್ಲಿ ನಡೆಯಲಿದೆ.
ಬೆಳಿಗ್ಗೆ ಗಂಟೆ 8.30 ರಿಂದ ಶ್ರೀ ಶಾರದಾ ವಿಗ್ರಹ ಪ್ರತಿಷ್ಠೆ, ಗಣಪತಿ ಹೋಮ ನಡೆಯಲಿದೆ.
ಬೆಳಿಗ್ಗೆ ಗಂಟೆ 10.00 ರಿಂದ
ಶ್ರೀ ಶಾರದಾಂಬಾ ಮಹಿಳಾ ಮಂಡಳಿ ದರ್ಖಾಸ್ತು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಗಂಟೆ 12.00 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ.
ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ ಗಂಟೆ 4.00 ಕ್ಕೆ ವಾಹನ ಪೂಜೆ ನಡೆಯಲಿದೆ.
ಸಂಜೆ ಗಂಟೆ 6.00 ರಿಂದ ಊರವರಿಂದ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 7.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ.
ಶ್ರೀ ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ದರ್ಖಾಸ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಅತಿಥಿಗಳಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್ ರೈ,ಸುಬ್ರಹ್ಮಣ್ಯ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್ ರೈ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಲ್ಲವಿ,ಎಸ್.ಡಿ.ಎಂ.ಸಿ.ಅಧ್ಯಕ್ಷ ಹರೀಶ್ ದರ್ಖಾಸ್ತು, ಮುತ್ತುಮಾರಿಯಮ್ಮ ದೇವಸ್ಥಾನ್ ವ್ಯ.ಸ.ಅಧ್ಯಕ್ಷ ನಟರಾಜ್ ಡಿ.ಆರ್.ವೇದಿಕೆಯಲ್ಲಿ ಉಪಸ್ಥಿತರಿರುವರು.
ಬಳಿಕ ಮಹಾಪೂಜೆ ನಡೆಯಲಿದೆ.
ನಂತರ ಸಿಂಚನಾ ಆರ್ಕೇಸ್ಟ್ರಾ ಕರ್ನಾಟಕ ಮತ್ತು ಕೇರಳದ ಪ್ರಖ್ಯಾತ ಕಲಾವಿದರಿಂದ ಅದ್ದೂರಿಯ ಸಂಗೀತ ರಸಮಂಜರಿ ನಡೆಯಲಿದೆ.
ಅ.24 ರಂದು ಪೂರ್ವಾಹ್ನ ಗಂಟೆ 10.00 ಕ್ಕೆ ಊರಿನವರಿಗೆ ಆಟೋಟ ಸ್ಪರ್ಧೆಗಳು ನಡೆಯಲಿದೆ.
ಅರಣ್ಯ ಇಲಾಖೆ ರಾಷ್ಟ್ರೀಯ ವಾಲಿಬಾಲ್ ಆಟಗಾರ ಶಂಕರಲಿಂಗಂ ದರ್ಖಾಸ್ತು ಉದ್ಘಾಟಿಸಲಿದ್ದಾರೆ.
ಪುರುಷರಿಗೆ ಹಗ್ಗಜಗ್ಗಾಟ,ಮಡಕೆ ಒಡೆಯುವುದು,ಗೋಣಿಚೀಲ ಓಟ ನಡೆಯಲಿರುವುದು.
ಮಹಿಳೆಯರಿಗೆ ಹಗ್ಗಜಗ್ಗಾಟ,ಮಡಕೆ ಒಡೆಯುವುದು,ಸಂಗೀತ ಕುರ್ಚಿ ನಡೆಯಲಿದೆ.
1ರಿಂದ 7 ನೇ ತರಗತಿ ಮಕ್ಕಳಿಗೆ ಲಿಂಬೆ ಚಮಚ, ಗೋಣಿಚೀಲ ಓಟ,ಕಪ್ಪೆಜಿಗಿತ ನಡೆಯಲಿದೆ.
ಸಂಜೆ ಗಂಟೆ 5.00 ಕ್ಕೆ ಶ್ರೀ ದೇವರ ವಿಜೃಂಭಣೆಯ ಶೋಭಾಯಾತ್ರೆ ನಡೆದು ಪುಡ್ಕಜೆ ಹೊಳೆಯಲ್ಲಿ ಜಲಸ್ತಂಭನ ನಡೆಯಲಿರುವುದು.