ಪಂಜ ಸರಕಾರಿ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಆರೋಗ್ಯ ಸೇವೆ : ಸಚಿವರಿಗೆ ಗಫೂರ್ ಮನವಿ

0

ಪಂಜ ಸರಕಾರಿ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಆರೋಗ್ಯ ಸೇವೆ ದೊರೆಯುವಂತೆ ಕ್ರಮಕೈಗೊಳ್ಳಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮಾಜಿ ತಾ.ಪಂ. ಸದಸ್ಯ ಅಬ್ದುಲ್ ಗಫೂರ್ ಮನವಿ ಮಾಡಿದ್ದಾರೆ.

ಪಂಜ ಕಂದಾಯ ಹೋಬಳಿ ಕೇಂದ್ರವಾಗಿದ್ದು ಸುಮಾರು ೧೨ ಗ್ರಾಮಗಳನ್ನು ಒಳಪಡುವ ಸ್ಥಳವಾಗಿದೆ. ಇಲ್ಲಿ ಯಾವುದೇ ಸರಿಯಾದ ಖಾಸಗಿ ಆಸ್ಪತ್ರೆಯೂ ಇರುವುದಿಲ್ಲ. ಹಾಗಾಗಿ ಜನರು ಪಂಜ ಸರಕಾರಿ ಆಸ್ಪತ್ರೆಯನ್ನೇ ನಂಬಿಕೊಂಡಿದ್ದಾರೆ. ಇಂತಹ ಜನ ಸಾಮಾನ್ಯರಿಗೆ ಸಂಜೆ ೪ ಗಂಟೆಯ ನಂತರ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ಇರುವುದರಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಸ್ಥಳೀಯ ಸಂಘಟನೆಯಾದ ಮಹಾತ್ಮಗಾಂಧಿ ವಿದ್ಯಾಪೀಠದವರು ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸ ಬೇಕೆಂದು ಮನವಿ ಸಲ್ಲಿಸಿದ್ದಾರೆ ಎಂದು ಗಫೂರ್ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿ ಮನವಿ ಸಲ್ಲಿಸುವ ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ರಾಜೀವಿ ರೈ, ಪಂಜ ಗ್ರಾ.ಪಂ. ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಬೊಳ್ಳಾಜೆ, ಮಾಜಿ ತಾ.ಪಂ.ಸದಸ್ಯೆ ಶ್ರೀಮತಿ ವಿಮಲ ರಂಗಯ್ಯ ಉಪಸ್ಥಿತರಿದ್ದರು.