ಗುತ್ತಿಗಾರು: ಶ್ರೀಶೂಲಿನಿ ದುರ್ಗಾದೇವಿ ಮತ್ತು ಶಾಸ್ತಾವು ಕ್ಷೇತ್ರ ಮುತ್ಲಾಜೆ-ಚಣಿಲದಲ್ಲಿ ದುರ್ಗಾಪೂಜೆ

0

ಹಗ್ಗಜಗ್ಗಾಟ ಸ್ಪರ್ಧೆ : ಬಲ್ನಾಡು ಬ್ರದರ್ಸ್‌ ವಳಲಂಬೆ, ಪ್ರೆಂಡ್ಸ್ ಕುಡುಪಲ್ತಡ್ಕ ಪ್ರಥಮ

ಶ್ರೀಶೂಲಿನಿ ದುರ್ಗಾದೇವಿ ಮತ್ತು ಶಾಸ್ತಾವು ಕ್ಷೇತ್ರ ಮುತ್ಲಾಜೆ-ಚಣಿಲದಲ್ಲಿ ನವರಾತ್ರಿಯ ದುರ್ಗಾಪೂಜೆ ಹಾಗೂ ಹಗ್ಗಜಗ್ಗಾಟ ಸ್ಪರ್ಧೆ ಅ.19 ರಂದು ನಡೆಯಿತು.

ಬೆಳಿಗ್ಗೆ ಗಣಪತಿ ಹೋಮ ಸಂಜೆ ದುರ್ಗಾಪೂಜೆ , ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು ಹಾಗೂ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಭಜನಾ ಸೇವಾ ಸಮಿತಿ ವಳಲಂಬೆ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಮಂಗಳಾರತಿ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಅ.20 ರಂದು ಆಯುಧಪೂಜಾ ಕಾರ್ಯಕ್ರಮ ನಡೆಯಿತು.

ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ತಿರುಮಲೇಶ್ವರ ಭಟ್ ಚಣಿಲ, ಅಧ್ಯಕ್ಷ
ದಯಾನಂದ ಮುತ್ಲಾಜೆ, ಕಾರ್ಯದರ್ಶಿ ಜಯರಾಮ ವಳಲಂಬೆ ಸ್ಥಳೀಯರಾದ ದೇವಿಪ್ರಸಾದ್ ಚಿಕ್ಮುಳಿ, ಲೊಕೇಶ್ ಎಣ್ಣೆಮಜಲು, ವಿಜಯ್ ಚಾರ್ಮತ, ಜಯಪ್ರಕಾಶ್ ಬಾಕಿಲ, ದಯಾನಂದ ಕನ್ನಡ್ಕ, ನವೀನ್ ಬಾಳುಗೋಡು, ಲೊಕೇಶ್ ಪುಲ್ಲಡ್ಕ, ಭರತ್ ಹುಲಿಕೆರೆ, ಶ್ರೇಯಸ್ ಮುತ್ಲಾಜೆ, ಶಿವಪ್ರಕಾಶ್ ಅಡ್ಡನಪಾರೆ, ವಿನ್ಯಾಸ್ ಕೊಚ್ಚಿ, ದಿಗಂತ್ ಕಡ್ತಲ್ ಕಜೆ ಬಹುಮಾನ ವಿತರಿಸಿದರು. ದೇವರಾಜ್ ಮುತ್ಲಾಜೆ ಕಾರ್ಯಕ್ರಮ ನಿರೂಪಿಸಿದರು.

ಹಗ್ಗಜಗ್ಗಾಟ ಸ್ಪರ್ಧೆ
ದುರ್ಗಾಪೂಜೆಯ ಪ್ರಯುಕ್ತ
ಪುರುಷರ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ ನಡೆದಿದ್ದು
ಪುರುಷರ ವಿಭಾಗದಲ್ಲಿ ಬಲ್ನಾಡು ಬ್ರದರ್ಸ್‌ ವಳಲಂಬೆ ಪ್ರಥಮ, ಶಿವಶಕ್ತಿ ಶಿವಾಜಿ ನಗರ ದ್ವಿತೀಯ, ಶ್ರೀ ದುರ್ಗಾ ಬಲ್ಕಾಡಿ ತೃತೀಯ ಹಾಗೂ ಬಲ್ನಾಡು ಬ್ರದರ್ಸ್‌ ವಳಲಂಬೆ ಚರ್ತುರ್ಥ ಸ್ಥಾನ ಪಡೆಯಿತು.
ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರೆಂಡ್ಸ್ ಕುಡುಪಲ್ತಡ್ಕ
ಪ್ರಥಮ, ನಾಗಶ್ರೀ ಪ್ರೆಂಡ್ಸ್ ಸುಳ್ಯ ದ್ವಿತೀಯ, ತೃಪ್ತಿ ಪ್ರೆಂಡ್ಸ್ ಮೊಗ್ರ ಬಂದಾರು ಉಪ್ಪಿನಂಗಡಿ ತೃತೀಯ, ನಾಗಬ್ರಹ್ಮ ಪ್ರೆಂಡ್ಸ್ ಕೊಡಿಯಾಲ ಚರ್ತುರ್ಥ ಬಹುಮಾನ ಪಡೆದರು. ವಿಜೇತರಿಗೆ ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು.