ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,
ಕರ್ನಾಟಕ ಕ್ರೀಡಾ ಪ್ರಾಧಿಕಾರ, ರಾಷ್ಟ್ರೀಯ ಯೋಗಾಸನ ಕ್ರೀಡಾ ಸಂಸ್ಥೆ ಇದರ ಜಂಟಿ ಆಶ್ರಯದಲ್ಲಿ 4 ನೇ ವರ್ಷದ ಕರ್ನಾಟಕ ರಾಜ್ಯ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅ. 29 ರಂದು ನಡೆಯಿತು.
14 ವರ್ಷ ಒಳಗಿನ ವಯೋಮಾನದ ಬಾಲಕರ ವಿಭಾಗದ ಟ್ರೆಡಿಷನಲ್ ಯೋಗಾಸನ ಸ್ಪರ್ಧೆಯಲ್ಲಿ ತನುಷ್ ಎಂ.ಹೆಚ್ ಬೆಳ್ಳಿ ಪದಕ ಪಡೆದರು. ಈತ ಉಬರಡ್ಕದ ಹರೀಶ್ ಮೋಂಟಡ್ಕ ಹಾಗೂ ಭವಾನಿ ದಂಪತಿಯ ಪುತ್ರ. ಬಾಲಕಿಯರ ವಿಭಾಗದ ಟ್ರೆಡಿಶನಲ್ ಯೋಗಾಸನ ಸ್ಪರ್ಧೆಯಲ್ಲಿ ಹಾರ್ದಿಕ ಕೆ.ಕೆ ಕಂಚಿನ ಪದಕ ಹಾಗೂ ಆರ್ಟಿಸ್ಟಿಕ್ ಸೋಲೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ತಂಡದಲ್ಲಿ ಪ್ರತಿನಿಧಿಸಲಿದ್ದಾರೆ. ಇವರು ಸುಳ್ಯತಾಲೂಕು ಕಛೇರಿಯಲ್ಲಿ ಉದ್ಯೋಗಿಯಾಗಿರುವ ಕೃಷ್ಣಪ್ಪ ಗೌಡ. ಕೆ ಹಾಗೂ ಪುಷ್ಪಾವತಿ ದಂಪತಿಯ ಪುತ್ರಿ.
ಸುಳ್ಯಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಶಿಕ್ಷಕ
ಸಂತೋಷ್ ಮುಂಡಕಜೆಯವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.