ವಿಶ್ವದ ಅಗ್ರ ದಾಖಲೆ ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸುಬ್ರಹ್ಮಣ್ಯದ ಪರಮೇಶ್ ಮೈಕ್ರೋ ತನ್ನ ಹೆಸರು ದಾಖಲಿಸಿಕೊಂಡಿದ್ದಾರೆ. ಕಣ್ಣಿಗೆ ಯಾವುದೇ ಕನ್ನಡಕ ಹಾಕದೇ ಅತಿ ಕಡಿಮೆ ಅವಧಿ ೮೦ ನಿಮಿಷದಲ್ಲಿ ಕೇವಲ ೧೩೬ ಅಕ್ಕಿಕಾಳಿನಲ್ಲಿ ನಾಡಗೀತೆ ಬರೆದಿದ್ದಾರೆ. ಅಕ್ಕಿ ಕಾಲಿನಲ್ಲಿ ಹೆಸರು ಬರೆಯುವುದು, ನಾಡ ಗೀತೆ ಬರೆಯುವುದು ಇವರ ಹವ್ಯಾಸವಾಗಿ ಬೆಳೆಸಿ ಈಗ ದಾಖಲೆ ನಿರ್ಮಿಸಿದ್ದಾರೆ. ಇವರು ಮೂಲತಃ ಹಾವೇರಿಯವರು. ಸುಬ್ರಹ್ಮಣ್ಯ ಆದಿ ಸುಬ್ರಹ್ಮಣ್ಯ ಬಳಿ ಹಲವು ವರ್ಷಗಳಿಂದ ಅಂಗಡಿ ನಡೆಸುತಿದ್ದಾರೆ. ಈ ಹಿಂದೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ ದಲ್ಲಿ ದಾಖಲೆ ಬರೆದಿದ್ದರು.