ದ.ಕ. ಸಂಪಾಜೆ ಗ್ರಾಮ ಪಂಚಾಯತ್ ಹಾಗೂ ಗ್ರಾಮ ಸ್ವಚ್ಛತಾ ಸಮಿತಿಯ ನೇತೃತ್ವದಲ್ಲಿ ಕಲ್ಲುಗುಂಡಿ ಪೇಟೆಯ ಪ್ರಮುಖ ಸ್ಥಳಗಲ್ಲಿ ತ್ಯಾಜ್ಯ ನಿರ್ವಹಣಾ ತೊಟ್ಟಿಯನ್ನು ಅಳವಡಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ಡಿಸೋಜ ಅವರು ಸ್ವಚ್ಛತೆ ಬಗ್ಗೆ ತಿಳಿಸಿ ಎಲ್ಲರ ಸಹಕಾರ ಕೋರಿದರು.
ಕಲ್ಲುಗುಂಡಿಯ ನವಮಿ ಸ್ಟೋರ್ ಬಳಿ ತ್ಯಾಜ್ಯ ನಿರ್ವಹಣಾ ತೊಟ್ಟಿ ಅಳವಡಿಸುವ ಮೂಲಕ ಸ್ಥಳೀಯ ವೈದ್ಯರಾದ ಶ್ಯಾಮ್ ಪ್ರಸಾದ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಗದೀಶ್ ರೈ, ವಿಮಲಾ ಪ್ರಸಾದ್ ವರ್ತಕರ ಸಂಘದ ಕಾರ್ಯದರ್ಶಿ ರಝಕ್ ಸೂಪರ್, ಕಿಪಾಯತುಲ್ಲ ಭಾರತ್, ಸ್ವಚ್ಛತಾ ಸಮಿತಿ ಕಾರ್ಯದರ್ಶಿ ಮಂಜುನಾಥ್, ಬಯೋ ಬ್ಲಡ್ ಕೇರ್ ಸೆಂಟರ್ ಮನೋಜ್,ಉದಯಕುಮಾರ್ ಪೂಜಾ ಫೈನಾನ್ಸ್, ಅಬೂಬಕ್ಕ ಎಂ. ಸಿ. ಮೊದಲದವರು ಉಪಸ್ಥಿತರಿದ್ದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಸ್ವಾಗತಿಸಿ, ಈಗಾಗಲೇ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಯ್ದ ಸ್ಥಳಗಳಲ್ಲಿ ತ್ಯಾಜ್ಯ ನಿರ್ವಹಣಾ ತೊಟ್ಟಿ ಇಡಲಾಗಿದ್ದು, ಎಲ್ಲಾ ಅಂಗಡಿಗಳಿಗೆ ಒಣ ಕಸ ಚೀಲ ನೀಡಲಾಗಿದೆ. ಹಸಿ ಕಸ ಸಂಗ್ರಹಣೆ ಮಾಡಲು ಎಲ್ಲಾ ಅಂಗಡಿಗೂ ಬಕೆಟ್ ನೀಡಲಾಗುವುದು ಎಂದು ಹೇಳಿದರು.