ಗುತ್ತಿಗಾರು ಸೈoಟ್ ಮೇರಿಸ್ ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬ ಆಚರಣೆ

0

ಗುತ್ತಿಗಾರು ಸೈoಟ್ ಮೇರಿಸ್ ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬ ಆಚರಣೆ ಡಿ.24 ರಂದು ಆಚರಿಸಲಾಯಿತು.
ಪ್ರೀತಿ, ಅನ್ಯೋನತೆ,ಹಾಗೂ ಸಾಮರಸ್ಯವನ್ನು ಸಾರಿ ಹೇಳುವ ಕ್ರಿಸ್ಮಸ್ ಕಾರೋಲ್ ಭವ್ಯ ಮೆರವಣಿಗೆ ಗುತ್ತಿಗಾರು ಪೇಟೆ ಯಲ್ಲಿ ನಡೆಸಲಾಯಿತ್ತು.

ಕ್ರಿಸ್ಮಸ್ ಹಬ್ಬದ ಪ್ರಯುಕ್ತ
ಡಿ.24 ರ ಸಂಜೆ ಗುತಿಗಾರು ಕೆಳಗಿನ ಪೇಟೆಯಿಂದ ಪ್ರಾರಂಭವಾದ ಭವ್ಯ ಮೆರವಣಿಗೆ ನಿಶ್ಚಲ ದೃಶ್ಯದೊಂದಿಗೆ ಚರ್ಚ್ ವಠಾರಕ್ಕೆ ಬಂದು ಸೇರಿತು. ಮೆರವಣಿಗೆಯಲ್ಲಿ ನೂರಾರು ಕ್ರೈಸ್ತ ಭಾಂದವರು ಭಾಗವಹಿಸಿದರು. ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬದ ಪೂಜಾ ವಿಧಿಗಳು ವಿಜೃಂಭಣೆಯಿಂದ ನೆರವೇರಿತು. ಕ್ರಿಸ್ತ ಯೇಸುವಿನ ಜನನದ ಸಂಕೇತವಾದ ಸುಂದರವಾದ ಗೋದಲಿಯನ್ನು ಚರ್ಚ್ ಅಂಗಳದಲ್ಲಿ ನಿರ್ಮಿಸಲಾಯಿತ್ತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಾl ಆದರ್ಶ್ ಜೋಸೆಫ್ ಅವರು ಸಮಾಜದಲ್ಲಿ ಪ್ರೀತಿ, ಅನ್ಯೋನತೆ, ಸಾಮರಸ್ಯ ಹಾಗೂ ಸಮಾನತೆಯನ್ನು ಬದುಕು ಕಟ್ಟಲು ಕ್ರಿಸ್ಮಸ್ ಹಬ್ಬ ಪ್ರೇರಣೆಯಾಗಲಿ ಎಂದು ಕರೆಯಿತ್ತರು.