ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಕಮಿಟಿ ಬಿ ಇದರ ಆಡಳಿತದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ವಿ.ಜಿ. ಪಾಲಿಟೆಕ್ನಿಕ್ ಇದರ ನೂತನ ಪ್ರಾಂಶುಪಾಲರಾಗಿ ಶ್ರೀಧರ್ ಎಮ್.ಕೆ ಇವರು ದಿನಾಂಕ ೩೧.೦೧.೨೦೨೪ ರಂದು ಅಧಿಕಾರ ಸ್ವೀಕರಿಸಿದರು. ಇದುವರೆಗೆ ಪ್ರಾಂಶುಪಾಲರಾಗಿದ್ದ ಜಯಪ್ರಕಾಶ್ ಕಲ್ಲುಗದ್ದೆ ಯವರು ಸೇವಾ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಕಮಿಟಿ ಬಿ ಇದರ ಅಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಮಾತನಾಡಿ ಸಂಸ್ಥೆಯ ಪ್ರಾರಂಭದ ದಿನಗಳಿಂದ ಸೇವೆ ಸಲ್ಲಿಸಿದ ಜಯಪ್ರಕಾಶ್ ಕಲ್ಲುಗದ್ದೆಯವರಿಗೆ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿ ನೂತನ ಪ್ರಾಂಶುಪಾಲರಿಗೆ ಶುಭಹಾರೈಸಿದರು. ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಕಮಿಟಿ ಬಿ ಇದರ ಕಾರ್ಯದರ್ಶಿಗಳಾದ ಡಾ. ಜ್ಯೋತಿ ಆರ್ ಪ್ರಸಾದ್ ಮತ್ತು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಊರುಬೈಲು ಅವರು ಮಾತನಾಡಿ ಸಂಸ್ಥೆಯ ಏಳಿಗೆಗೆ ಎರೂ ಒಗ್ಗಟ್ಟಾಗಿ ಶ್ರಮಿಸುತ್ತಾ ಸಂಸ್ಥೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸುವಲ್ಲಿ ಎರೂ ಕೆಲಸಮಾಡಬೇಕು ಎಂದು ಸಲಹೆ ನೀಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯಿಂದ ನಿವೃತ್ತರಾದ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಸತ್ಯನಾರಾಯಣ ಪ್ರಸಾದ್, ಮೆಕ್ಯಾನಿಕಲ್ ವಿಭಾಗದ ಸಹಭೋಧಕರಾದ ಚಂದ್ರಶೇಖರ ಎಮ್.ಕೆ ಇವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎನ್ ಎ ರಾಮಚಂದ್ರ, ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದ ರಾಮಚಂದ್ರ, ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್, ಐ.ಟಿ.ಐ ಕಾಲೇಜಿನ ಪ್ರಾಂಶುಪಾಲರಾದ ಚಿದಾನಂದ ಗೌಡ ಬಾಳಿಲ, ಉಪ ಪ್ರಾಂಶುಪಾಲರಾದ ದಿನೇಶ್ ಮಡ್ತಿಲ, ಭಾಗಮಂಡಲ ಕೆ.ವಿ.ಜಿ ಐ.ಟಿ.ಐ ಕಾಲೇಜಿನ ಪ್ರಾಂಶುಪಾಲರಾದ ಶ್ರೀಕಾಂತ್ ಕುಡೆಕಲ್ಲು, ಕೆ.ವಿ.ಜಿ ದಂತ ಮಹಾವಿದ್ಯಾಲಂiiದ ಪ್ರಾಧ್ಯಾಪಕರುಗಳಾದ ಮನೋಜ್ ಕುಮಾರ್ ಅಡ್ಡಂತಡ್ಕ, ರೇವಂತ್ ಸೂಂತೋಡು, ವಿವಿಧ ಕಾಲೇಜುಗಳ ಆಡಳಿತಾಧಿಕಾರಿಗಳಾದ ಮಾಧವ ಬಿ ಟಿ, ನಾಗೇಶ್ ಕೊಚ್ಚಿ, ಪ್ರಸನ್ನ ಕಲ್ಲಾಜೆ, ಭವಾನಿಶಂಕರ ಅಡ್ತಲೆ, ಶಿವರಾಮ ಕೇರ್ಪಳ, ಧನಂಜಯ ಕಲ್ಲುಗದ್ದೆ, ಸಿಬ್ಬಂಧಿಗಳಾದ ವಸಂತ ಕಿರಿಭಾಗ, ಕಮಲಾಕ್ಷ ನಂಗಾರು, ವಿಶ್ವನಾಥ ಕುಂಚಡ್ಕ ಸಹಿತ ಕೆ.ವಿ.ಜಿ ಪಾಲಿಟೆಕ್ನಿಕ್‌ನ ವಿಭಾಗದ ಮುಖ್ಯಸ್ಥರುಗಳು, ಕಾಲೇಜಿನ ಸಿಬ್ಬಂಧಿಗಳು ಉಪಸ್ಥಿತರಿದ್ದರು.