ಮಿನುಂಗೂರು ದೇವಸ್ಥಾನ ನಿರ್ಮಾಣಕ್ಕೆ ಕ್ಷೇತ್ರದ ತಂತ್ರಿಗಳಿಂದ ಶಿಲಾನ್ಯಾಸ – ಸಭಾ ಕಾರ್ಯಕ್ರಮ

0

ಪಂಚಸ್ಥಾಪನೆಗಳ ನಾಡಿನಲ್ಲಿ ತಾಯಿಯ ಸಾನಿಧ್ಯ ಬೆಳಗುತ್ತಿರುವುದು ಎಲ್ಲರ ಪುಣ್ಯ. ಧರ್ಮ ಸಂವಿಧಾನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಬೆಳಗುತ್ತದೆ. ಅದರೊಂದಿಗೆ ಸಮಾಜ, ದೈವ ದೇವರ ಕ್ಷೇತ್ರ ಬೆಳೆಯುತ್ತದೆ ಎಂದಯ ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ಕ್ಷೇತ್ರ ಒಡಿಯೂರು ಇಲ್ಲಿಯ ಗುರುದೇವಾನಂದ ಸ್ವಾಮೀಜಿಗಳು ಹೇಳಿದರು. ಅವರು ಮಿನುಂಗೂರು ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗಳಲ್ಲಿ ಒಂದಾದ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಗೊಳ್ಳುತ್ತಿದ್ದು, ನವೀಕರಣ ಪುನಃ ಪ್ರತಿಷ್ಠೆ ಸಿದ್ಧಿರ್ಥಕ್ಕಾಗಿ ಶಿಲಾನ್ಯಾಸ ಕಾರ್ಯಕ್ರಮವು ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಭಕ್ತಾವೃಂದದ ಉಪಸ್ಥಿತಿಯಲ್ಲಿ ನಡೆಯಿತು.

ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ವಹಿಸಿದ್ದರು.

ಸಭಾ ಕಾರ್ಯಕ್ರಮ ದ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಿ, ಮರ್ಕಂಜ ನನ್ನ ಹುಟ್ಟೂರು, ಅಡಿಕೆಗೆ ಹಳದಿ, ಎಲೆಚುಕ್ಕಿ ಬಂದಿದ್ದರೂ, ಕಷ್ಟ ಪಟ್ಟು ಕಟ್ಟುವ ದೇವಸ್ಥಾನವನ್ನು ಕ್ಷೇತ್ರದ ದೇವಿ ಸ್ವೀಕರಿಸುತ್ತಾಳೆ ಎಂದರು.

ವೇದಿಕೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮುಖ್ಯ ಅತಿಥಿಗಳಾಗಿದ್ದರು. ನೆಲ್ಲೂರು ಕೆಮ್ರಾಜೆ ಗ್ರಾ.ಪಂ.ಅಧ್ಯಕ್ಷ ಧನಂಜಯ ಕುಮಾರ್, ಮರ್ಕಂಜ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಮೇಶ್ ಕಾಟೂರಾಯ, ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ, ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಮಾಜಿ ಆಡಳಿತ ಮೊಕ್ತೇಸರ ಯುವರಾಜ್ ಜೈನ್, ಕೊಡಗು ಅಖಿಲ ಭಾರತ ಸಂತರ ಸಮಿತಿ ಅಧ್ಯಕ್ಷ ರಾಜೇಶನಾಥ ಸ್ವಾಮೀಜಿ ಗೌರವ ಉಪಸ್ಥಿತರಿದ್ದರು.

ಸಭೆಯಲ್ಲಿ ಸುಳ್ಯ ವೆಂಕಟರಮಣ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಮುಖರಾದ ಎಸ್.ಎನ್.ಮನ್ಮಥ, ಮರ್ಕಂಜ ಗ್ರಾ.ಪಂ.‌ಅಧ್ಯಕ್ಷೆ ಗೀತಾ ಹೊಸೊಳಿಕೆ ಸೇರಿದಂತೆ ವಿವಿಧ ಸಮಿತಿಯ ಅಧ್ಯಕ್ಷರುಗಳು, ಸಮಿತಿ ಸದಸ್ಯರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮ ಕ್ಕೆ ಸ್ವಾಮೀಜಿಯವರನ್ನು, ಅತಿಥಿಗಳನ್ನು ಯಕ್ಷಗಾನ ಹಿಮ್ಮೇಳದೊಂದಿಗೆ, ಪೂರ್ಣಕುಂಭ ಸ್ವಾಗತದೊಂದಿಗೆ ಕರೆತರಲಾಯಿತು.