ಸುಳ್ಯ ಲಯನ್ಸ್ ಕ್ಲಬ್ ಗೆ ಲಯನ್ಸ್ ಜಿಲ್ಲಾ ಗವರ್ನರ್ ಅಧಿಕೃತ ಭೇಟಿಯ ಸಂದರ್ಭದಲ್ಲಿ ದಿಶಾನಿ ಪ್ರಾಂತೀಯ ಸಮ್ಮೇಳನದ ಸವಿ ನೆನಪಿಗಾಗಿ MJF ಪುರಸ್ಕಾರವನ್ನು ಪಡೆದ ಪ್ರಾಂತೀಯ ಸಮ್ಮೇಳನದ ಕಾರ್ಯದರ್ಶಿಯಾಗಿದ್ದ ಲ|ಡಾ| ಲಕ್ಷೀಶ್ ಕೆ .ಎಸ್ ಇವರ ಕೊಡುಗೆಯನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸನ್ಮಾನ ಕಾರ್ಯವನ್ನು ಲಯನ್ಸ್ ಜಿಲ್ಲಾ ಗವರ್ನರ್ ಲಾ|ಡಾ| ಮೇಲ್ವಿನ್ ಡೀಸೋಜ PMJF ರವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಇವರ ಕೊಡುಗೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಾಂತೀಯ ಸಮ್ಮೇಳನ ಸಮಿತಿಯ ವತಿಯಿಂದ ರೂಪಾಯಿ 50,000 ಚೆಕ್ ನ್ನು ಪ್ರಾಂತೀಯ ಅಧ್ಯಕ್ಷೆ ಲ|ರೇಣುಕಾ ಸದಾನಂದ ಜಾಕೆ MJF ರವರು ಸಮ್ಮೇಳನ ಸಮಿತಿ ಅಧ್ಯಕ್ಷೆ ಲ|ಅನಿತಾ ಲಸ್ರಾದೊ ಸಮ್ಮುಖದಲ್ಲಿ ಹಸ್ತಂತರಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ನ ಗೌರವಾನ್ವಿತ ಸದಸ್ಯರು ಉಪಸ್ಥಿತರಿದ್ದರು.