13 ಸ್ಥಾನಗಳ ಪೈಕಿ 11 ಸ್ಥಾನ ಗೆದ್ದು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ಕೊಂಡದೇರ ಬಾಂಡ್ ಗಣಪತಿ ನೇತೃತ್ವದ ಬಿಜೆಪಿ ಬೆಂಬಲಿತರು
ತಲಾ ಒಂದೊಂದು ಸ್ಥಾನದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತರು
ಕೊಡಗು ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯು ಮಾ.17ರಂದು ಮಡಿಕೇರಿಯಲ್ಲಿರುವ ಕೊಡಗು ಡಿ.ಸಿ.ಸಿ. ಬ್ಯಾಂಕ್ ಕಛೇರಿಯಲ್ಲಿ ನಡೆದಿದ್ದು, ಚುನಾವಣೆಯ ಬಳಿಕ ಸಂಜೆ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಬೆಂಬಲಿತ ಹಾಲಿ ಅಧ್ಯಕ್ಷ ಕೊಂಡದೇರ ಬಾಂಡ್ ಗಣಪತಿ ನೇತೃತ್ವದ ತಂಡ ಭರ್ಜರಿ ಬಹುಮತಗಳೊಂದಿಗೆ ವಿಜೇತರಾಗಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಒಟ್ಟು 13 ನಿರ್ದೇಶಕರುಗಳ ಬಲ ಹೊಂದಿರುವ ಕೊಡಗು ಡಿ.ಸಿ.ಸಿ. ಬ್ಯಾಂಕ್ ಚುನಾವಣೆ 24 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಹನ್ನೊಂದು ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ತಲಾ ಓರ್ವ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ವಿಜೇತರಾಗಿದ್ದಾರೆ.
ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಹಾಲಿ ಅಧ್ಯಕ್ಷ ಕೊಂಡದೇರ ಬಾಂಡ್ ಗಣಪತಿ, ಕೆ.ಎಸ್. ಪೂವಯ್ಯ, ಜೆ. ಸತೀಶ್ ಕುಮಾರ್ ಹೊಸೂರು, ಸತೀಶ್ ಎನ್. ಕಾಂಗೀರ, ರಮೇಶ್ ಹೆಚ್.ಎಂ., ಪೊಳಂಡ ಪಿ. ಪೆಮ್ಮಯ್ಯ, ಕೆ.ಬಿ. ಅರುಣ, ಹೆಚ್.ಕೆ. ಮಾದಪ್ಪ, ಎನ್.ಎಂ. ಉತ್ತಪ್ಪ , ಗುಮ್ಮಟ್ಟೀರ ಎಸ್. ಕಿಲನ್ ಗಣಪತಿ, ಹಾಗೂ ಜಲಜಾಕ್ಷಿ ವೈ.ಪಿ. ಬಹುಮತಗಳೊಂದಿಗೆ ವಿಜೇತರಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಪಿ. ಶರತ್ ಶೇಖರ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರವಣ ಕುಮಾರ್ ಟಿ.ಆರ್. ವಿಜೇತರಾಗಿದ್ದು, ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.