ಸೋಣಂಗೇರಿ ಗೋಂಟಡ್ಕ ಪ್ರಕಾಶ್ ರೈಯವರ ರಬ್ಬರ್ ತೋಟದಲ್ಲಿ ರಬ್ಬರ್ ಬೋರ್ಡ್ ವತಿಯಿಂದ ರಬ್ಬರ್ ಮೂರ್ತೆ ಮತ್ತು ಮಾಹಿತಿ ಕಾರ್ಯಾಗಾರ ಮೇ.7 ಮಂಗಳವಾರದಂದು ನಡೆಯಲಿದೆ.
ಕಾರ್ಯಾಗಾರದ ಉದ್ಘಾಟಕರಾಗಿ ರಬ್ಬರ್ ಪ್ರಾದೇಶಿಕ ಮಂಡಲಿಯ ನಿರ್ದೇಶಕರು ಹಾಗೂ ಸುಳ್ಯ ತಾಲೂಕಿನ ಫೀಲ್ಡ್ ಆಫೀಸರ್ ಹಾಗೂ ತರಬೇತುದಾರರಾದ ಸೊಕ್ಕಲಿಂಗಂ, ಕುಕ್ಕನ್ನೂರು ಮತ್ತು ಸತ್ಯಶಾಂತಿತ್ಯಾಗಮೂರ್ತಿ ಸೋಣಂಗೇರಿ ಉಪಸ್ಥಿತರಿರುವರು.
ಈಗಾಗಲೇ ನೋಂದಾವಣೆ ಮಾಡಿಕೊಂಡವರು ನಿಗದಿತ ದಿನಾಂಕದಂದು ನಿಗದಿತ ಸಮಯಕ್ಕೆ ಸರಿಯಾಗಿ ತಮ್ಮ ಆಧಾರ್ ಕಾರ್ಡ್ ಮತ್ತು ಕಾರ್ಯಾಗಾರದ ಶುಲ್ಕ ರೂಪಾಯಿ 500ರೊಂದಿಗೆ ಹಾಜರಿರಬೇಕೆಂದು ವಿನಂತಿಸಲಾಗಿದೆ.
ಮಾಹಿತಿ ಕಾರ್ಯಾಗಾರದಲ್ಲಿ ರಬ್ಬರ್ ಮೂರ್ತೆಗೆ ಸಂಬಂಧಿಸಿದಂತೆ ನಾಡಕತ್ತಿ, ಜೆಬೋಂಗ್ ಕತ್ತಿ ಮತ್ತು ಗೂಜಿಕತ್ತಿಯಲ್ಲಿ ನೀಡಲಾಗುವುದು.
ರಬ್ಬರಿಗೆ ಸಂಬಂಧಿಸಿದ ಶೀಟ್ ತಯಾರಿಕೆ, ಹಾಗೂ ಇನ್ನಿತರ ಎಲ್ಲಾ ರೀತಿಯ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು.
ಮಾಹಿತಿ ಕಾರ್ಯಾಗಾರದಲ್ಲಿ ರಬ್ಬರ್ ಮೂರ್ತೆಗೆ ಸಂಬಂಧಿಸಿದಂತೆ ನಾಡಕತ್ತಿ,ಜೆಬೋಂಗ್ ಕತ್ತಿ, ಮತ್ತು ಗೂಜಿಕತ್ತಿಯಲ್ಲಿ ತರಬೇತಿ ನೀಡಲಾಗುವುದು.ರಬ್ಬರಿಗೆ ಸಂಭಂದಿಸಿದ ಶೀಟ್ ತಯಾರಿಕೆ, ಹಾಗೂ ಇನ್ನಿತರ ಎಲ್ಲಾ ರೀತಿಯ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು.