ಮುರುಳ್ಯ ಗ್ರಾಮದ ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಮೇ.18 ಮತ್ತು 19ರಂದು ವೆ.ಮೂ.ನೀಲೇಶ್ವರ ಕೆ.ಯು.ದಾಮೋದರ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಮೇ. 18 ರಂದು ಸಂಜೆ 6.30ಕ್ಕೆ ತಂತ್ರಿಗಳ ಆಗಮನ, ಗಂಟೆ 7.00ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಗಂಟೆ 7.30ಕ್ಕೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಶುದ್ದಿ, ಪ್ರಾಸಾದ ಶುದ್ದಿ, ರಕ್ಟೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂರ್ಪಣೆ, ಸಂಜೆ 6.00ಕ್ಕೆ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಂಜೆ 7ರಿಂದ 8.00: ಯಕ್ಷಗಾಯನ : ಹೇಮ ಸ್ವಾತಿ ಕುರಿಯಾಜೆ ಇವರಿಂದ, ರಾತ್ರಿ9 ರಿಂದ ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ ತುಳುನಾಡ ಕಲಾ ಬಿರ್ಸೆ ದೀಪಕ್ ರೈ ಪಾಣಾಜೆ ಅಭಿನಯಿಸುವ, ರಂಗ್‌ದ ರಾಜೆ ಸುಂದರ್‌ರೈ ಮಂದಾರ ನಿರ್ದೇಶಿಸಿ, ಅಭಿನಯಿಸುವ ಅಲೇ ಬುಡಿಯೆರ್‌ಗೆ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಮೇ.19 ಬೆಳಿಗ್ಗೆ ಗಂಟೆ 6.00ರಿಂದ ಗಣಪತಿ ಹವನ, ಬಿಂಬ ಶುದ್ದಿ, ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ಬಲಿ ಹೊರಡುವುದು, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಂಗಳಾರತಿ, ಮಂತ್ರಾಕ್ಷತೆ, ಸಂಪ್ರೋಕ್ಷಣೆ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ. ಮೇ.21 ರಂದು ನರಸಿಂಹ ಜಯಂತಿ ಪ್ರಯುಕ್ತ ಮದ್ಯಾಹ್ನ ವಿಶೇಷ ಪೂಜೆ ರಾತ್ರಿ ರಂಗಪೂಜೆ, ಅನ್ನಸಂತರ್ಪಣೆ ನಡೆಯಲಿದೆ.