ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ (610) ಪಡೆದ ಕು.ನಿರೀಕ್ಷಾ ಪಿ.ಸಿ.ಯವರನ್ನು ಮೇ.10 ರಂದು ಸನ್ಮಾನಿಸಲಾಯಿತು.
ಕೆ.ಪಿ.ಎಸ್ ನ ಎಸ್.ಡಿ.ಎಂ.ಸಿ.ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಕಟ್ಟಡ ಸಮಿತಿ ಅಧ್ಯಕ್ಷ ಹರ್ಷ ಜೋಗಿಬೆಟ್ಟು, ಶರತ್ ಪೂಗವನ ರವರು ನಿರೀಕ್ಷಾ ರವರನ್ನು ಮನೆಯಲ್ಲಿ ಶಾಲು ಹೊದಿಸಿ,ಫಲ,ಪುಷ್ಪ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನಿರೀಕ್ಷಾರವರ ತಂದೆ ಚಂದ್ರಶೇಖರ ಪಡ್ಪು,ತಾಯಿ ಹೇಮಲತಾರವರು ಉಪಸ್ಥಿತರಿದ್ದರು.