ಕೆ.ಎಪ್.ಡಿ.ಸಿ. ಶಟಲ್ ಬ್ಯಾಡ್ಮಿಂಟನ್ ಕ್ಲಬ್ ಇದರ ಆಶ್ರಯದಲ್ಲಿ ತಮಿಳು ರಿಪಾರ್ಟಿಯರ್ಸ್ ಯುನೈಟೆಡ್ ಸೇವಾ ಟ್ರಸ್ಟ್ (ರಿ.) ಸುಳ್ಯ ಇವರ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಉಚಿತ ಶಟಲ್ ಬ್ಯಾಡ್ಮಿಂಟನ್ ಶಿಬಿರವು ಎ. ೧೩ ರಂದು ಪ್ರಾರಂಭವಾಗಿ ಎ. ೨೮ ರ ವರೆಗೆ ೧೫ ದಿವಸಗಳ ಕಾಲ ಸುಳ್ಯದ ಸೈಂಟ್ ಜೋಸೆಫ್ ಶಾಲೆಯಲ್ಲಿ ನಡೆಯಿತು .
ಶಿಬಿರದ ಉದ್ಘಾಟನೆಯನ್ನು ಚರ್ಚ್ ಫಾದರ್ ವಿಕ್ಟರ್ ಡಿಸೋಜಾ ನೇರವೇರಿಸಿದರು. ಮುಖ್ಯ ಅತಿಥಿಗಳಾಗಿ ಅಮರ ಜ್ಯೋತಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ರೀ.ಅರುಣ್ ಕುಮಾರ್, ಲ. ರಂಗನಾಥ್,ಮನೋಹರ ಕಾರ್ಯದರ್ಶಿ ಶಟಲ್ ಬ್ಯಾಡ್ಮಿಂಟನ್ ಕ್ಲಬ್ (ರಿ) ಸುಳ್ಯ. ರಂಗನಾಥ್ ನಾಗ ಪಟ್ಟಣ, ಹಾಗೂ ಪುವೇಂದ್ರನ್ ಕೂಟೇಲು ಅಧ್ಯಕ್ಷರು ತಮಿಳು ರಿಪಾರ್ಟಿಯರ್ಸ್ ಯುನಿಟೆಡ್ ಸೇವಾ ಟ್ರಸ್ಟ್ ( ರಿ)ಸುಳ್ಯ .ಹಾಗೂ ಎಲ್ಲಾ ದೈಹಿಕ ಶಿಕ್ಷಕರು ಭಾಗವಹಿಸಿದ್ದರು.. ಆಗಮಿಸಿದ ಅತಿಥಿಗಳು ಕ್ರೀಡೆ ಹಾಗೂ ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರತಿ ವರ್ಷ ಈ ಶಿಬಿರವನ್ನು ಮುಂದುವರೆಸಬೇಕೆಂದು ಆಶಿಸಿದರು.
ಸಮಾರೋಪ ಸಮಾರಂಭವು ಎ.೨೮ ರಂದು ನಡೆಯಿತು.
ಅತಿಥಿಗಳಾಗಿ ರಾಮನ್ ಉದ್ಯಮಿಗಳು ಮಂಗಳೂರು,ಕುಮರೇಶನ್ ಅಧ್ಯಕ್ಷರು ತಮಿಳು ಫ್ಯಾಮಿಲಿ ಪ್ರೆಂಡ್ಸ್ ಮಂಗಳೂರು, ಗಣಪತಿ ಪ್ರಾಂಶುಪಾಲರು ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜು ಹಾಸನ, ಶಿವಕುಮಾರ್ ಅಧ್ಯಕ್ಷರು ರೀಕೋ ಸೊಸೈಟಿ ಸುಳ್ಯ, ಶರತ್ ನಾಗ ಪಟ್ಟಣ ಅಧ್ಯಕ್ಷರು ದ.ಕ.ತಮಿಳು ಸೇವಾ ಸಂಘ (ರಿ) ಸುಳ್ಯ, ಪುವೇಂದ್ರನ್ ಕೂಟೇಲು ಅಧ್ಯಕ್ಷರು ತಮಿಳು ರಿಪಾರ್ಟಿಯರ್ಸ್ ಯುನಿಟೆಡ್ ಸೇವಾ ಟ್ರಸ್ಟ್ ( ರಿ) ಸುಳ್ಯ. ಇವರು ಭಾಗವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಲ್ಲರನ್ನೂ ಸನ್ಮಾನಿಸಲಾಯಿತು.
೮೦ಕ್ಕೂ ಹೆಚ್ಚು ಶಿಬಿರಾರ್ಥಿ ವಿದ್ಯಾರ್ಥಿಗಳು ಹಾಗೂ ಮನೆಯವರು ಭಾಗವಹಿಸಿದ್ದರು.. ಅತಿಥಿಗಳು ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಶಿಬಿರವನ್ನು ಆಯೋಜಿಸಿದ್ದ ಕ್ಲಬ್ ನ ಪದಾಧಿಕಾರಿಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಎಲ್ಲಾ ಶಿಬಿರಾರ್ಥಿ ವಿದ್ಯಾರ್ಥಿಗಳಿಗೆ ೧೪ ದಿವಸ ಉಚಿತವಾಗಿ ಉಪಹಾರ ವ್ಯವಸ್ಥೆ ಮಾಡಲಾಯಿತು. ಎಲ್ಲರಿಗೂ ಸರ್ಟಿಫಿಕೇಟ್ ಮೆಮೊಂಟೋ, ಉಚಿತ ಸಮವಸ್ತ್ರವನ್ನು ನೀಡಲಾಯಿತು.
ಶಿಬಿರದ ಕೋಚ್ ಗಳಾಗಿ ಶಶಿಕುಮಾರ್, ರಂಗನಾಥ್, ನವೀನ್ ಸಹಕರಿಸಿದರು.