ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ SSLC ಸಾಧಕರಿಗೆ ಸನ್ಮಾನ

0

SSLC ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಸಂಸ್ಥೆಗೆ ಕೀರ್ತಿ ತಂದ ಅನ್ಸಾರಿಯ ಹಿಫ್ಲುಲ್ ಕುರ್ಆನ್ ಕಾಲೇಜಿನ ಹಾಗೂ ಗ್ರೀನ್ ವ್ಯೂ ಆಂಗ್ಲ ಮಾದ್ಯಮ ಶಾಲೆಯ 10 ನೇ ತರಗತಿಯ ವಿಧ್ಯಾರ್ಥಿಗಳಾದ ಮೊಹಮ್ಮದ್ ಶಾಝ್ ಮತ್ತು ಮೊಹಮ್ಮದ್ ಮುಸ್ತಫ ಇವರನ್ನು ಅನ್ಸಾರ್ ಗೋಲ್ಡನ್ ಜ್ಯುಬಿಲಿ ಸಭಾಂಗಣದಲ್ಲಿ ಉಲೇಮಾ ಹಾಗೂ ಉಮರಾ ಸಾರಥ್ಯದಲ್ಲಿ ಶಾಲು,ಹಾರ, ಸ್ಮರಣೆಕೆಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮ ಅದ್ಯಕ್ಷತೆಯನ್ನು ಟ್ರಸ್ಟ್ ಅದ್ಯಕ್ಷ ಹಾಗು ನ.ಪಂ ಸದಸ್ಯರಾದ ರಿಯಾಝ್ ಕಟ್ಚೆಕ್ಕಾರ್ ವಹಿಸಿದ್ದು ವೇದಿಕೆಯಲ್ಲಿ ಸ್ಥಳೀಯ ಕೇಂದ್ರ ಜುಮಾ ಮಸೀದಿಯ ಖತೀಬರಾದ ಬಹು| ಅಲ್ಹಾಜ್ ಅಶ್ರಫ್ ಖಾಮಿಲ್ ಸಖಾಫಿ, ಇಫ್ಲುಲ್ ಕುರ್ಆನ್ ಕಾಲೇಜಿನ ಪ್ರಾಂಶುಪಾಲರಾದ ಬಹು|ಆಫಿಳ್ ಹಾಮಿದ್ ಹಿಮಮಿ ಸಖಾಫಿ, ಎಂ.ಐ ಅರೇಬಿಕ್ ಮದರಸದ ಸದರ್ ಉಸ್ತಾದ್ ಬಹು| ಸಿರಾಜುದ್ದೀನ್ ಸಖಾಫಿ, ಎಂ.ಐ ಮದರಸ ಉಸ್ತಾದ್ ಬಹು|ಅಬ್ದುಲ್ ರಹಮಾನ್ ಸಅದಿ, ಮೊದಲಾದವರು ಶುಭ ಹಾರೈಸಿದರು ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಎಸ್.ಎಂ ಹಮೀದ್, ನಿರ್ದೇಕರಾದ ಉಬೈದುಲ್ಲಾ ಕಟ್ಟೆಕ್ಕಾರ್ ,ನ.ಪಂ ಸದಸ್ಯರುಗಳಾದ ಉಮ್ಮರ್ ಕೆ.ಎಸ್,
ಶರೀಫ್ ಕಂಟಿ, ಸಿದ್ದೀಕ್ ಕೊಕ್ಕೊ, ಅನ್ಸಾರಿಯ ಏಜುಕೇಶನ್ ಸೆಂಟರ್ ಉಪಾದ್ಯಕ್ಷರಾದ ಎಸ್.ಪಿ.ಅಬೂಬಕ್ಕರ್ ನಿರ್ದೇಶಕರುಗಳಾದ ಅಬ್ದುಲ್ ಗಫ್ಫಾರ್, ಹಮೀದ್ ಬೀಜಕೊಚ್ಚಿ, ಟ್ರಸ್ಟ್ ನಿರ್ದೇಶಕರುಗಳಾದ ನಾಸಿರ್ ಕಟ್ಟೆಕ್ಕಾರ್, ಹನಿಫ್ ಬೀಜಕೊಚ್ಚಿ, ನಾಸಿರ್ ನಾವೂರು, ಶಿಹಾಬ್ ಕೇರ್ಪಳ, ಮರ್ಝೂಕ್ ಬೀಜಕೊಚ್ಚಿ, ಈ ವಾರ್ತೆಯ ಮುಖ್ಯ ಕಾರ್ಯ ನಿರ್ವಾಹಕ ರಶೀದ್ ಜಟ್ಟಿಪ್ಪಳ್ಳ, ಪೋಷಕರಾದ ಅಬ್ದುಲ್ ರಝಾಕ್ ಸಂಗಮ್, ಅಬ್ದುಲ್ ಅಝೀಝ್ ಸಂಗಮ್ ಮೊದಲಾದವರು ಪಾಲ್ಗೊಂಡಿದ್ದರು ಕಾರ್ಯಮನ್ನು ಅನ್ಸಾರಿಯಾ ಎಜುಕೇಶನ್ ಸೆಂಟರ್ ನಿರ್ದೇಶಕರಾದ ಕೆ.ಬಿ.ಇಬ್ರಾಹಿಂ ನಿರ್ವಹಿಸಿ ಸ್ವಾಗತಿಸಿ, ವಂದಿಸಿದರು