ರಾಘವೇಂದ್ರ ನಾಯ್ಕ ಮರೆಂಗಲ ನಿಧನ

0

ಬಾಳಿಲ ಗ್ರಾಮದ ಮರೆಂಗಲ ಸುಬ್ಬಣ್ಣ ನಾಯ್ಕ ಮತ್ತು ಶ್ರೀಮತಿ ಪುಷ್ಪಾವತಿ ದಂಪತಿಗಳ ಪುತ್ರ ರಾಘವೇಂದ್ರ ನಾಯ್ಕ ರವರು ಅಲ್ಪ ಕಾಲದ ಅಸೌಖ್ಯದಿಂದ ಮೇ.12 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 35 ವರುಷ ವಯಸ್ಸಾಗಿತ್ತು. ಅವರು ಮೇ.11ರಂದು ಆನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರು ಅವಿವಾಹಿತರಾಗಿದ್ದು, ತಂದೆ, ತಾಯಿ, ಸಹೋದರಾದ ಅಶೋಕ್, ನವೀನ್, ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.