ಸುಳ್ಯ ಮಾಂಡೋವಿ ಮೋಟಾರ್ಸ್ ನಲ್ಲಿ 4th ಜನರೇಷನ್ ಹೊಸ ಇಪಿಕ್ ಸ್ವಿಪ್ಟ್ ಮಾರುಕಟ್ಟೆಗೆ

0

ಮಾರುತಿ ಸುಜುಕಿ ಕಾರುಗಳ ಅಧಿಕೃತ ಡೀಲರ್ ಸುಳ್ಯದ ಮಾಂಡೋವಿ ಮೋಟಾರ್ಸ್ ನಲ್ಲಿ ಹೊಚ್ಚ ಹೊಸ 4th ಜನರೇಷನ್ ಇಪಿಕ್ ಸ್ವಿಪ್ಟ್ ಕಾರು ಮಾರುಕಟ್ಟೆಗೆ ಬಿಡುಗಡೆ ಕಾರ್ಯಕ್ರಮ ಮೇ. 23ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಕುಂಭಕೋಡು, ಕಸ್ತೂರಿಕಲಾ ಅಚ್ಚುತ ಭಟ್ ಕಲಾಮಂದಿರದ ಮಾಲಕಿ ಶ್ರೀಮತಿ ಶಶಿಕಲಾ ಶುಭಕರ್ ರಾವ್, ವಿನೋದ್ ಲಸ್ರಾದೋ, ಬ್ಯಾಂಕ್ ಆಫ್ ಬರೋಡಾ ಸೀನಿಯರ್ ಮ್ಯಾನೇಜರ್ ವಿಜಯ್, ಮಾಂಡೋವಿ ಮೋಟಾರ್ಸ್ ಸೇಲ್ಸ್ & ಮಾರ್ಕೆಟಿಂಗ್ ಡಿಜಿಎಂ ಶಶಿಧರ್ ಕಾರಂತ್ ಅತಿಥಿಗಳಾಗಿ ಭಾಗವಹಿಸಿದ್ದರು.


ವರ್ಕ್ಸ್ ಮ್ಯಾನೇಜರ್ ಸುಧೇಶ್ ಜೈನ್ ಸ್ವಾಗತಿಸಿ, ಮಾರ್ಕೆಟಿಂಗ್ ಮ್ಯಾನೇಜರ್ ಸುರೇಶ್ ಭಟ್ ವಂದಿಸಿದರು. ಹರೀಶ್ ದೋಲ ನೂತನ ಕಾರಿನ ಬಗ್ಗೆ ಮಾಹಿತಿ ನೀಡಿದರು. ರಾಮಚಂದ್ರ ಗೌಡ, ಸರಸ್ವತಿ ಸೊಸೈಟಿ ಮ್ಯಾನೇಜರ್ ರಾಜೇಶ್ ಉಪಸ್ಥಿತರಿದ್ದರು.

ಅಮಿತ್ ಕುಮಾರ್ ಕಾರ್ಯಕ್ರಮ ನಿರೂಪಿದರು. ರಿಲೇಷನ್ಷಿಪ್ ಮ್ಯಾನೇಜರ್ ಗಳಾದ ಮುಖೇಶ್, ಹರೀಶ್, ದಿಲೀಪ್, ಮಿಲನ್, ಜೀವಿತ್, ವಿದ್ಯಾ ಸುಖೇಶ್, ಸರ್ವಿಸ್ ಎಡೈಸರ್ ಗಳಾದ ಅರವಿಂದ್, ದುರ್ಗಾದಸ್, ಪುನೀತ್, ಚರಣ್, ಗುರುರಾಜ್ ಸಹಕರಿಸಿದರು.