ಗೌಡ ಸಾರಸ್ವತ ಸಮಾಜದ 18 ಪೇಟೆ ದೇವಸ್ಥಾನಗಳಲ್ಲೊಂದಾದ ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟ್ರಮ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ವೈಶಾಖ ಪೂರ್ಣಿಮಾ ಮಹೋತ್ಸವಗಳು ಮೇ. 23ರಂದು ನಡೆಯಿತು.
ಬೆಳಿಗ್ಗೆ ಪ್ರಾರ್ಥನೆ, ವೆಂಕಟರಮಣ ದೇವರಿಗೆ ದ್ವಾದಶಕಲಶಾಭಿಷೇಕ, ಸಂಪ್ರೋಕ್ಷಣೆ, ಸಾನ್ನಿಧ್ಯ ಹವನ, ನಾಗದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಉಭಯ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಭೂರಿಸಮಾರಾಧನೆ ನಡೆಯಿತು.
ರಾತ್ರಿ ಶ್ರೀ ವೆಂಕಟರಮಣ ದೇವರ ಪೇಟೆ ಸವಾರಿ, ಪಲ್ಲಕಿ ಉತ್ಸವ, ವಸಂತೋತ್ಸವ, ಪ್ರಸಾದ ವಿತರಣೆ ನಡೆಯಿತು. ದೇವಸ್ಥಾನದ ಮೊಕ್ತೇಸರರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.