ಪರವೂರ ಸುಳ್ಯದವರ ಸುದ್ದಿ

0

ಸಮಾಜ ಕಲ್ಯಾಣ ಇಲಾಖೆಯ ಸಾರ್ವಜನಿಕ ವಿದ್ಯಾರ್ಥಿ ನಿಲಯ ಬೆಳ್ತಂಗಡಿ ಇಲ್ಲಿಗೆ 13.6.1991 ರಲ್ಲಿ ಡಿ ದರ್ಜೆ ಸಿಬ್ಬಂದಿಯಾಗಿ ಕರ್ತವ್ಯಕ್ಕೆ ಸೇರಿದ ಜಾನಕಿಯವರು ಸುದೀರ್ಘ 33 ವರ್ಷಗಳ ಸೇವೆ ಸಲ್ಲಿಸಿ ಮೇ.31ರಂದು ವಯೋ ನಿವೃತ್ತಿ ಹೊಂದಿರುತ್ತಾರೆ.

ಸುಳ್ಯ ತಾ. ಜಾಲ್ಸೂರು ಗ್ರಾಮದ ಅರ್ಭಡ್ಕ ಮನೆಯ ದಿ.ರಾಮಣ್ಣ ಗೌಡ ಹಾಗೂ ದಿ.ಲಕ್ಷ್ಮಿ ದಂಪತಿಯ ಮೂರನೇ ಪುತ್ರಿಯಾದ ಇವರು ತನ್ನ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿ ಪೂರೈಸಿ 13.6. 1991 ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಾರ್ವಜನಿಕ ವಿದ್ಯಾರ್ಥಿ ನಿಲಯ ಬೆಳ್ತಂಗಡಿ ಇಲ್ಲಿ ಸೇವೆಗೆ ಸೇರ್ಪಡೆಗೊಂಡ ಇವರು 12 ವರ್ಷ ಕರ್ತವ್ಯ ನಿರ್ವಹಿಸಿ, ಪರಿಶಿಷ್ಟ ವರ್ಗ ವಾಲ್ಮೀಕಿ ವಸತಿ ಶಾಲೆ ಕಡೆಶಿವಾಲಯ ಇಲ್ಲಿಗೆ 6.6.2003 ಕರ್ತವ್ಯಕ್ಕೆ ಹಾಜರಾದರು.

ಇದೀಗ ಸುದೀರ್ಘ 33 ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ.