ಬಿಜೆಪಿ ವಿಧಾನಪರಿಷತ್ ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಸುಳ್ಯ ಮಹಿಳಾ ಮೋರ್ಛಾದಿಂದ ಮತಯಾಚನೆ

0

ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಚುನಾವಣಾ ಅಭ್ಯರ್ಥಿಗಳ ಪರವಾಗಿ ಸುಳ್ಯದ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ,ಡೆಂಟಲ್ ಕಾಲೇಜು, ನೆಹರು ಮೆಮೋರಿಯಲ್ ಕಾಲೇಜು, ಮತ್ತು ಆಯುರ್ವೇದಿಕ್ ಕಾಲೇಜು, ಸರಕಾರಿ ಜೂನಿಯರ್ ಕಾಲೇಜು, ಸರಕಾರಿ ಪದವಿ ಪೂರ್ವ ಕಾಲೇಜು, ಕೊಡಿಯಾಲ ಬೈಲು, ಮತ್ತು ಸುಮನಾ ಬೆಳಾರ್ಕರ್,ಮನೆ ಭೇಟಿ ಮಾಡಿ ಮತದಾರರನ್ನು ಸಂಪರ್ಕಿಸಿ ಸುಳ್ಯ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಮತ ಯಾಚಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶ್ರೀಮತಿ ಗುಣವತಿ ಕೊಲ್ಲಂತಡ್ಕ, ಮಹಿಳಾ ಮೋರ್ಚಾ ಕಾರ್ಯದರ್ಶಿ ಶಶಿಕಲಾ. ಎ. ಮಾಜಿ ತಾ.ಪಂ‌. ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ, ಅರಂತೋಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು , ಗ್ರಾಮ ಪಂಚಾಯತ್ ಸದಸ್ಯರಾದ ದಿವ್ಯ ಮಡಪ್ಪಾಡಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸತ್ಯವತಿ ಅಜ್ಜಾವರ, , ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕುಸುಮಾಧರ ಎ.ಟಿ. ಉಪಸ್ಥಿತರಿದ್ದರು.