ಸುಳ್ಯತಾಲೂಕು ಪಂಚಾಯತ್,ಆಲೆಟ್ಟಿ
ಗ್ರಾಮಪಂಚಾಯತ್,
ಸುಳ್ಯ ಅರಣ್ಯ ಇಲಾಖೆ, ಅಮರ ಸಂಘಟನಾ ಸಮಿತಿ, ಸ. ಹಿ. ಪ್ರಾಥಮಿಕ ಶಾಲೆ ಇಡ್ಯಡ್ಕಅರಂಬೂರು,
ಜೂನಿಯರ್ ರೆಡ್‌ಕ್ರಾಸ್ ಘಟಕ (ರೋಟರಿ ಸಂ. ಪ. ಪೂ. ಕಾಲೇಜ್ ಸುಳ್ಯ) ಇವುಗಳ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಜೀವ ವೈವಿಧ್ಯತಾ ದಿನದ ಪ್ರಯುಕ್ತವಿಶ್ವ ಪರಿಸರ ದಿನಾಚರಣೆಯನ್ನು
ಜೂ. 5 ರಂದು ಇಡ್ಯಡ್ಕ ಶಾಲೆಯಲ್ಲಿಆಚರಿಸಲಾಯಿತು.
ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾವಸಂತ ಆಲೆಟ್ಟಿ ಯವರು ಗಿಡ ನೆಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈಸಂದರ್ಭದಲ್ಲಿಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಶೈಲಜಾ ಎಲ್, ಉಪವಲಯ ಅರಣ್ಯ ಅಧಿಕಾರಿಗಳಾದ ಆನಂದ, ಮೋಹಿತ್,ವೀರಭದ್ರಯ್ಯ ಕರಣೀಮಠ,ಆಲೆಟ್ಟಿ ಪಂ.ಪ್ರಭಾರ ಪಿ.ಡಿ.ಒ ಸೃಜನ್ ಎ.ಜಿ,ರೋಟರಿ ಸ. ಪ. ಪೂ. ಕಾಲೇಜು ಶಿಕ್ಷಕ ಹರ್ಷಿತ್ ಜಿ.ಜೆ,ಅಮರ ಸಂಘಟನಾ ಸಮಿತಿ ಅಧ್ಯಕ್ಷ ಸಾತ್ವಿಕ್ ಮಡಪ್ಪಾಡಿ ಉಪಸ್ಥಿತರಿದ್ದರು.
ಶಾಲಾಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದವರು, ಗ್ರಾಂ. ಪಂ.ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು, ಶಾಲಾವಿದ್ಯಾರ್ಥಿಗಳು,
ಆಲೆಟ್ಟಿ ಪ್ರಾಥಮಿಕ ಅರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಆಶಾಕಾರ್ಯಕರ್ತೆಯರು, ಶಾಲಾ ಭೋದಕೇತರ ಸಿಬ್ಬಂದಿಗಳು ಸಹಕರಿಸಿದರು.