ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ದೀಪಾಂಜಲಿಯವರ 11ನೇ ವರ್ಷದ ವಾರ್ಷಿಕ ಸಂಭ್ರಮ – 2024

0

ಜೂನ್ 9ರಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಸನ್ನಿಧಾನದಲ್ಲಿ ಬೆಳಿಗ್ಗೆ ಸರಿಯಾಗಿ ದೇವಸ್ಥಾನದ ಧರ್ಮಕರ್ತರಾದ ಡಾ|| ಜಿ .ಭೀಮೇಶ್ವರ ಜೋಷಿ ಹಾಗೂ ಅವರ ಧರ್ಮಪತ್ನಿ ಬಿ. ರಾಜಲಕ್ಷ್ಮೀ ದಂಪತಿಗಳು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಶುಭಾ ಅಶೀರ್ವದಿಸಿದರು. ರಾಜಲಕ್ಷ್ಮೀಯವರು ಭಜನೆಯ ಮಹತ್ವವನ್ನು ಸವಿ ವಿವರವಾಗಿ ತಿಳಿಸಿದರು. ನಮ್ಮ ಭಜನಾ ಗುರುಗಳಾದ ಮಧ್ವಾಧೀಶ ವಿಠಲದಾಸ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರು ಅಧ್ಯಕ್ಷ ಸ್ಥಾನ ವಹಿಸಿ ಭಜನಾ ಉದ್ದೇಶವನ್ನು ತಿಳಿಸಿದರು. ವೇದಿಕೆಯಲ್ಲಿ ಮಾತೃತ್ವಂನ ಅಧ್ಯಕ್ಷೆ ಈಶ್ವರಿ ಬೇರ್ಕಡ ಉಪಸ್ಥಿತರಿದ್ದು ಶುಭ ಹಾರೈಸಿದರು. ಪುತ್ತೂರು ವೈದೇಹಿ ವೈಷ್ಣವಿ ಭಜನಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ|| ಜಿ. ಭೀಮೇಶ್ವರ್ ಜೋಷಿ ದಂಪತಿಗಳಿಗೆ ಗೌರವ ಸನ್ಮಾನ ಕಾಟುಕುಕ್ಕೆ ಭಜನಾ ಗುರುಗಳಾದ ರಾಮಕೃಷ್ಣ ದಂಪತಿಗಳಿಗೆ ಗುರುವಂದನೆ, ಹಾಗೂ ಕಾಟುಕುಕ್ಕೆ ಚಾರಿಟೇಬಲ್ ಟ್ರಸ್ಟ್ (ರಿ)ನ ಕಾರ್ಯದರ್ಶಿ ಪರಮೇಶ್ವರಿ ಭಟ್ ಬಲ್ನಾಡು ಮತ್ತು ಕೋಶಾಧಿಕಾರಿ ಕಿರಣ್ ಕುಮಾರ್ ರೈ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಪರಮೇಶ್ವರಿ,ಟ್ರಸ್ಟ್ ನ ಕೋಶಾಧಿಕಾರಿ ಕಿರಣ್ ಕುಮಾರ್ ರೈ ಹಾಗೂ ಭಜನಾ ಮಂಡಳಿಯ ಕೋಶಾಧಿಕಾರಿ ಶೋಭಾ ಉಪಸ್ಥಿತರಿದ್ದರು. ದೀಪಾಂಜಲಿಯ ಅಧ್ಯಕ್ಷರು ಹರ್ಷ ಕರುಣಾಕರ ಸೇರ್ಕಜೆ ಇವರು ಪ್ರಾಸ್ತವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಕುಸುಮ ಮೋಂಟಡ್ಕ ವಂದಿಸಿದರು. ಟ್ರಸ್ಟ್ ಕಾರ್ಯದರ್ಶಿ ಪರಮೇಶ್ವರಿ ಭಟ್ ಕಾರ್ಯಕ್ರಮ ನಿರೂಪಿಸಿದರು .

ಸಭಾ ಕಾರ್ಯಕ್ರಮದ ನಂತರ ಸುಮಾರು 15 ಮಂಡಳಿಗಳಿಂದ ಎರಡೆರಡು ಭಜನಾ ಸಂಕೀರ್ತನೆ. ಮಕ್ಕಳಿಂದ ಕುಣಿತ ಭಜನಾ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನಿಗೆ ಭಜನಾ ಗುರುಗಳಿಂದ ಅನ್ನಪೂರ್ಣ ದೇವಿಯ ಎರಡು ಸಮೂಹ ಗಾಯನವನ್ನು ಎಲ್ಲಾ ಭಜಕರಿಂದ ನಡೆಸಿಕೊಡಲಾಯಿತು. ಹಾರ್ಮೋನಿಯಂನಲ್ಲಿ ಕಿಶೋರ್ ಪೆರ್ಲ, ತಬಲದಲ್ಲಿ ಲವಕುಮಾರ್ ಐಲ ಸಾಥ್ ಕೊಟ್ಟರು. ಅಲ್ಲಿನ ಸಂಪೂರ್ಣ ಸಹಕಾರವನ್ನು ಭೀಮೇಶ್ವರ ಜೋಷಿ ದಂಪತಿಗಳು ಆತಿಥ್ಯ . ತಾಯಿಯ ಪ್ರಸಾದ ರೂಪವಾಗಿ (ಹಸಿರು ಬಣ್ಣದ ಸಮವಸ್ತ್ರ) ಸೀರೆ ನೀಡಿ ಸತ್ಕರಿಸಿ ಹರಸಿ ಆಶೀರ್ವದಿಸಿದರು. ದೀಪಾಂಜಲಿಯ 11ನೇ ವರ್ಷದ ವಾರ್ಷಿಕ ಸಂಭ್ರಮವು ವಿಜ್ರಂಭಣೆಯಿಂದ ಶ್ರೀದೇವಿಯ ಸನ್ನಿಧಿಯಲ್ಲಿ ನೆರವೇರಿತು.