ಕಂಪೌಂಡ್ ಜರಿದು ಬಿದ್ದು ಅದರ ಕೆಳಭಾಗದಲ್ಲಿ ಇದ್ದ ಮತ್ತೊಂದು ಮನೆಗೆ ಹಾನಿಯಾದ ಘಟನೆ ಜೂ ೨೫ ರಂದು ರಾತ್ರಿ ಜಯನಗರದಲ್ಲಿ ಸಂಭವಿಸಿದೆ.
ಜಯನಗರ ನಿವಾಸಿ ರಫೀಕ್ ಫ್ರೂಟ್ಸ್ ಎಂಬವರ ಮನೆಯ ಮೇಲೆ ಭಾಗದಲ್ಲಿ ಇದ್ದ ಗಂಗಾಧರ ಎಂಬವರ ಮನೆಯ ಕಾಪೌಂಡ್ ರಾತ್ರಿ ಸುರಿದ ಬಾರಿ ಮಳೆಗೆ ಕುಸಿದು ಬಿದ್ದಿದ್ದು ರಫೀಕ್ ರವರು ಇತ್ತೀಚಿಗೆ ನಿರ್ಮಿಸಿದ ಮನೆಯ ಶೀಟಿನಮೇಲೆ ಬಿದ್ದು ಸುಮಾರು ೫೦ ಸಾವಿರ ರೂಪಾಯಿಗಳ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅಧಿಕಾರಿಗಳು, ಸುಳ್ಯ ನ.ಪಂ. ಸದಸ್ಯೆ ಶಿಲ್ಪಾ ಸುದೇವ್ರವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.