ಪಡ್ಪಿನಂಗಡಿ: ಬರೆ ಕುಸಿದು ಮನೆಗೆ ಹಾನಿ

0

ಐವತ್ತೊಕ್ಲು ಗ್ರಾಮದ ಪಡ್ಪಿನಂಗಡಿ ಎಂಬಲ್ಲಿ ಜೂ.25 ರಂದು ರಾತ್ರಿ ಸುರಿದ ಮಳೆಗೆ ಬರೆ ಕುಸಿದು ಮನೆಗೆ ಹಾನಿಯಾಗಿರುವ ಘಟನೆ ವರದಿಯಾಗಿದೆ.

ಐವತ್ತೊಕ್ಲು ಗ್ರಾಮದ ಅಬ್ದುಲ್ ಅಝೀಝ್ ಎಂಬವರ ಮನೆ ಬಳಿ ಇರುವ
ಬರೆ ಕುಸಿದು ಮನೆಗೆ ಹಾನಿಯಾಗಿದೆ.ಸ್ಥಳಕ್ಕೆ ಕಂದಾಯ ಇಲಾಖೆಯವರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.