ಅರಂಬೂರು : ಸಮಸ್ತ ಸ್ಥಾಪನಾ ದಿನ

0

ಉಲಮಾ ಒಕ್ಕೂಟ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ 99ನೇ ಸ್ಥಾಪನಾ ದಿನಾಚರಣೆ ಜೂನ್ 26 ರಂದು ಅರಂಬೂರು ಬದರ್ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.

ಸ್ಥಳೀಯ ಮಸೀದಿ ಸಮಿತಿ ಅಧ್ಯಕ್ಷ ಹಾಜಿ ಭಾಷಾ ಸಾಹಿಬ್ ಧ್ವಜಾರೋಹಣ ನೆರವೇರಿಸಿದರು. ಖತೀಬ್ ಉಸ್ತಾದ್ ಮುಈನುದ್ದೀನ್ ಫೈಝಿ ಪೈಂಬಚ್ಚಾಲ್ ದುವಾ ನೆರವೇರಿಸಿ ಸಂದೇಶ ಭಾಷಣ ನಡೆಸಿದರು.
ಸುಳ್ಯ ತಾಲೂಕು ಸುನ್ನೀ ಮಹಲ್ ಫೆಡರೇಷನ್ ಅಧ್ಯಕ್ಷ ಹಾಜಿ ಎಸ್.ಎ ಹಮೀದ್,ಮಹಲ್ಲ್ ಪ್ರ.ಕಾರ್ಯದರ್ಶಿ ಕಲಂದರ್ ಅರಂಬೂರ್, SKSSF ಸುಳ್ಯ ಟೌನ್ ಕೋಶಾಧಿಕಾರಿ ಅಬ್ದುಲ್ ಕುಂಞಿ, SKSSF ಸುಳ್ಯ ವಲಯ ಟ್ರೆಂಡ್ ಚೇರ್ಮನ್ ಆಶಿಕ್ ಸುಳ್ಯ,ಇಬ್ರಾಹಿಂ ಮುಸ್ಲಿಯಾರ್, ಸಲೀಂ ಪಾಲಡ್ಕ, ಫಯಾಜ್, ಅಬ್ದುಲ್ ರಜಾಕ್, SKSBV ಅಧ್ಯಕ್ಷರಾದ ಆದಿಲ್, ಪ್ರ.ಕಾರ್ಯದರ್ಶಿ ಸಿಯಾಮ್, ಉಪಾಧ್ಯಕ್ಷ ಸಿನಾನುದ್ದೀನ್, ಕೋಶಾಧಿಕಾರಿ ಶಹೀರ್ ಉಪಸ್ಥಿತರಿದ್ದರು.
ಅಕ್ಬರ್ ಕರಾವಳಿ ಸ್ವಾಗತಿಸಿ ವಂದಿಸಿದರು.