ಜಾಲ್ಸೂರಿನ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ವತಿಯಿಂದ ನಡೆಸಲ್ಪಡುವ ಪಯಸ್ವಿನಿ ಪ್ರೌಢಶಾಲಾ ಮಂತ್ರಿಮಂಡಲವನ್ನು ಜು.13ರಂದು ರಚಿಸಲಾಯಿತು.
ಮುಖ್ಯಮಂತ್ರಿಯಾಗಿ ಹತ್ತನೇ ತರಗತಿಯ ಅನನ್ಯ ಸಿ.ಎನ್., ಉಪ ಮುಖ್ಯಮಂತ್ರಿಯಾಗಿ ಒಂಭತ್ತನೇ ತರಗತಿಯ ಜಸ್ಮಿತಾ ಕೆ.ಬಿ., ಗೃಹಮಂತ್ರಿಯಾಗಿ ಹತ್ತನೇ ತರಗತಿಯ ಕಿಶನ್, ಉಪ ಗೃಹಮಂತ್ರಿಯಾಗಿ ಒಂಭತ್ತನೇ ತರಗತಿಯ ನಿಧೀಶ್, ಸ್ವಚ್ಛತಾ ಮಂತ್ರಿಯಾಗಿ ಹತ್ತನೇ ತರಗತಿಯ ಕೌಶಿಕ್ ಕೆ. ನಾಯ್ಕ , ಉಪ ಸ್ವಚ್ಛತಾ ಮಂತ್ರಿಯಾಗಿ ಒಂಭತ್ತನೇ ತರಗತಿಯ ಚರಣ್, ಶಿಸ್ತುಮಂತ್ರಿಯಾಗಿ ಹತ್ತನೇ ತರಗತಿಯ ಮಹಮ್ಮದ್ ಶಾಹಿನ್, ಉಪ ಶಿಸ್ತು ಮಂತ್ರಿಯಾಗಿ ಒಂಭತ್ತನೇ ತರಗತಿಯ ಭವಿತ್ ಬಿ., ಕ್ರೀಡಾಮಂತ್ರಿಯಾಗಿ ಹತ್ತನೇ ತರಗತಿಯ ಸಲ್ಮಾನ್ ಫಾರಿಷ್ , ಉಪ ಕ್ರೀಡಾಮಂತ್ರಿಯಾಗಿ ಒಂಭತ್ತನೇ ತರಗತಿಯ ದೀಕ್ಷಿತ್ ಕೆ., ಕೃಷಿ ಮಂತ್ರಿಯಾಗಿ ಹತ್ತನೇ ತರಗತಿಯ ಅಜಿತ್, ಉಪ ಕೃಷಿಮಂತ್ರಿಯಾಗಿ ಒಂಭತ್ತನೇ ತರಗತಿಯ ಶಮಿತ್, ಸಾಂಸ್ಕೃತಿಕ ಮಂತ್ರಿಯಾಗಿ ಹತ್ತನೇ ತರಗತಿಯ ಮೇಘಶ್ರೀ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಒಂಭತ್ತನೇ ತರಗತಿಯ ಯೋಗಿನಿ, ಆಹಾರ ಮಂತ್ರಿಯಾಗಿ ಹತ್ತನೇ ತರಗತಿಯ ದೀಕ್ಷಾ ಕೆ., ಉಪ ಆಹಾರ ಮಂತ್ರಿಯಾಗಿ ಒಂಭತ್ತನೇ ತರಗತಿಯ ಇಝಾಮರಿಯಂ, ಸ್ವೀಕರ್ ಆಗಿ ಹತ್ತನೇ ತರಗತಿಯ ಫಾತಿಮತ್ ಸೈಬಾ, ವಾರ್ತಾಮಂತ್ರಿಯಾಗಿ ಒಂಭತ್ತನೇ ತರಗತಿಯ ಪ್ರಣಮ್ ಡಿ., ವಿರೋಧ ಪಕ್ಷದ ನಾಯಕನಾಗಿ ಹತ್ತನೇ ತರಗತಿಯ ಮುತಹಿರುದ್ಧೀನ್ ಆಯ್ಕೆಯಾದರು.