ಮುಂಬೈನ ನಿಯೋ ಸೆಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿ. ಇಲ್ಲಿ ಸೈಂಟಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿರುವ ಕುಡೆಕಲ್ಲಿನ ಶಿಪ್ರತ್‌ರವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.
ಸೋಡಿಯಂ ಬ್ಯಾಟರಿ ಟೆಕ್ನಾಲಜಿ ಕುರಿತು ರಚಿಸಿದ ಮಹಾಪ್ರಬಂದಕ್ಕೆ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ ಗೀತಂ ವಿಶ್ವ ವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿದೆ.
ಈ ಹಿಂದೆ ಇವರು ಕೋಲ್ಕಾತ್ತದ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಸನ್ಸ್ಟೇಬಲ್ ಎನರ್ಜಿ ಟಿಸಿಜಿ ಕ್ರೆಸ್ಟ್ ಇಲ್ಲಿ ಪೋಸ್ಟ್ ಡಾಕ್ಟರಲ್ ರಿಸರ್ಚ್ ರ್ ಆಗಿ ಕೆಲಸ ನಿರ್ವಹಿಸಿದ್ದಾರೆ.ಶಿಪ್ರತ್ ರವರು ಗೀತಂ ವಿಶ್ವವಿದ್ಯಾಲಯದ ಪ್ರೋಪೆಸರ್ ಡಾ.ಮಂಜುನಾಥ್‌ರವರ ಮಾರ್ಗದರ್ಶನದಲ್ಲಿ ಮಹಾಪ್ರಭಂದ ಮಂಡಿಸಿದ್ದರು.
ಇವರು ಆಲೆಟ್ಟಿ ಗ್ರಾಮದ ಕುಡೆಕಲ್ಲು ಮನೆಯ ಗಂಗಾಧರ ಗೌಡ ಹಾಗೂ ಪುಷ್ಪಾವತಿ ದಂಪತಿಯ ಪುತ್ರ. ಪತ್ನಿ ದೀಕ್ಷಾ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ.