ಮಡಪ್ಪಾಡಿ : ಶೀರಡ್ಕ ಸಂಪರ್ಕಿಸುವ ಮಾರ್ಗ ಮಧ್ಯೆ ಹೊಂಡ ನಿರ್ಮಾಣ

0

ತಕ್ಷಣ ಸರಿ ಪಡಿಸಲು ಊರವರ ಮನವಿ

ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದ ಮಡಪ್ಪಾಡಿ – ಶೀರಡ್ಕ ಸಂಪರ್ಕ ರಸ್ತೆಯ ದೊಡ್ಡಮೆಟ್ಟು ಎಂಬಲ್ಲಿ ಸೇತುವೆಯ ಗೋಡೆ ಮತ್ತು ರಸ್ತೆಯ ಮಧ್ಯೆ ದೊಡ್ಡದಾದ ಹೊಂಡ ಸೃಷ್ಟಿಯಾಗಿದೆ.‌ ಇದು ನೀರಿನ‌ ರಭಸಕ್ಕೆ ತಡೆಗೋಡೆಯ ಒಂದು ಭಾಗದ ಮಣ್ಣು‌ ಕೊಚ್ಚಿ ಹೋಗಿ ಮಾರ್ಗ ಮಧ್ಯೆ ಹೊಂಡ ನಿರ್ಮಾಣವಾಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಈ ರಸ್ತೆಯಲ್ಲಿ ದಿನಂಪ್ರತಿ ವಾಹನ ಸಂಚಾರಗಳಿದ್ದು, ಇದನ್ನು
ಸರಿ ಪಡಿಸದೆ ಇದ್ದಲ್ಲಿ ಇನ್ನಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇದೆ.